ಇಂಡಿಯಾ ಕೂಟದಿಂದ ಆಪ್‌ ಔಟ್‌ : ಸಂಜಯ ಸಿಂಗ್‌

| N/A | Published : Jul 19 2025, 01:00 AM IST / Updated: Jul 19 2025, 04:23 AM IST

ಸಾರಾಂಶ

 ಇಂಡಿಯಾ ಕೂಟದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎನ್ನುವ ವದಂತಿಗೆ ಮತ್ತೊಂ ದು ಸಾಕ್ಷ್ಯ ಸಿಕ್ಕಿದ್ದು, ‘ಆಮ್‌ ಆದ್ಮಿ ಇಂಡಿಯಾ ಕೂಟದಿಂದ ಹೊರ ಬಂದಿದ್ದು, ಮುಂಗಾರು ಅಧಿವೇಶನಕ್ಕೂ ಮುನ್ನ ಶನಿವಾರ ನಿಗದಿ ಯಾಗಿರುವ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಲ್ಲ’ ಎಂದು ಆಪ್‌ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.

 ನವದೆಹಲಿ: ಎನ್‌ಡಿಎ ಕಟ್ಟಿಹಾಕಲು ಒಗ್ಗೂಡಿದ್ದ ಇಂಡಿಯಾ ಕೂಟದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎನ್ನುವ ವದಂತಿಗೆ ಮತ್ತೊಂ ದು ಸಾಕ್ಷ್ಯ ಸಿಕ್ಕಿದ್ದು, ‘ಆಮ್‌ ಆದ್ಮಿ ಇಂಡಿಯಾ ಕೂಟದಿಂದ ಹೊರ ಬಂದಿದ್ದು, ಮುಂಗಾರು ಅಧಿವೇಶನಕ್ಕೂ ಮುನ್ನ ಶನಿವಾರ ನಿಗದಿ ಯಾಗಿರುವ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಲ್ಲ’ ಎಂದು ಆಪ್‌ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.

ಶುಕ್ರವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಇಂಡಿಯಾ ಕೂಟ ಕೇವಲ ಲೋಕಸಭೆ ಚುನಾವನೆಗೆ ರಚಿತವಾಗಿತ್ತು. ಆಪ್‌ ಮತ್ತು ಕಾಂಗ್ರೆಸ್‌ ಇಂಡಿಯಾ ಕೂಟದ ಭಾಗವಾಗಿ ಒಟ್ಟಾಗಿ ಸ್ಪರ್ಧಿಸಿದ್ದವು. ಆದರೆ ಆ ಬಳಿಕ ಹರ್ಯಾಣ, ದೆಹಲಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದೆವು’ ಎಂದರು.

‘ಆಮ್‌ ಆದ್ಮಿ ಇಂಡಿಯಾ ಕೂಟದಿಂದ ಹೊರಗಿದೆ. ನಮ್ಮ ಪಕ್ಷ, ಅರವಿಂದ್‌ ಕೇಜ್ರಿವಾಲ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ನಾವು ಇನ್ನು ಮೈತ್ರಿಕೂಟದ ಭಾಗವಾಗಿರಲ್ಲ. ನಾವು ಯಾವಾಗಲೂ ಬಲವಾದ ಮತ್ತು ಶಕ್ತಿಯುತ ವಿರೋಧ ಪಕ್ಷದ ಪಾತ್ರ ನಿರ್ವ ಹಿಸಿದ್ದೇವೆ. ಮುಂದೆಯೂ ಹಾಗೆ ಮಾಡುತ್ತೇವೆ, ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಸಂಸತ್ತಿನಲ್ಲಿ ಎತ್ತುತ್ತೇವೆ’ ಎಂದರು.

Read more Articles on