ತಾಯಿಯನ್ನು ಕಚ್ಚಿ ರಕ್ತ ಕುಡಿವೆ ಎಂದ ಕ್ರೂರಿ ಮಗಳು! ಹೃದಯ ವಿದ್ರಾವಕ ವಿಡಿಯೋ ವೈರಲ್‌

| N/A | Published : Mar 02 2025, 01:16 AM IST / Updated: Mar 02 2025, 06:30 AM IST

ಸಾರಾಂಶ

ಹರ್ಯಾಣದ ಹಿಸಾರ್‌ನ ಮಹಿಳೆಯೊಬ್ಬಳು ತನ್ನ ತಾಯಿಯನ್ನು ಕಚ್ಚಿ ‘ನಿನ್ನ ರಕ್ತ ಕುಡಿಯುವೆ’ ಎಂದು ಹೇಳಿ, ಕೂದಲನ್ನು ಎಳೆದು, ಕಪಾಳಮೋಕ್ಷ ಮಾಡುವ ಹೃದಯ ವಿದ್ರಾವಕ ವಿಡಿಯೋ ವೈರಲ್‌ ಆಗಿದೆ.

ಹಿಸಾರ್: ಹರ್ಯಾಣದ ಹಿಸಾರ್‌ನ ಮಹಿಳೆಯೊಬ್ಬಳು ತನ್ನ ತಾಯಿಯನ್ನು ಕಚ್ಚಿ ‘ನಿನ್ನ ರಕ್ತ ಕುಡಿಯುವೆ’ ಎಂದು ಹೇಳಿ, ಕೂದಲನ್ನು ಎಳೆದು, ಕಪಾಳಮೋಕ್ಷ ಮಾಡುವ ಹೃದಯ ವಿದ್ರಾವಕ ವಿಡಿಯೋ ವೈರಲ್‌ ಆಗಿದೆ.

ಬಳಿಕ ಆಕೆಯ ಸಹೋದರ ಪೊಲೀಸ್ ದೂರು ದಾಖಲಿಸಿದ್ದು, ಆಕೆ ತಮ್ಮ ತಾಯಿಯನ್ನು ಬಂಧಿಯಾಗಿ ಇಟ್ಟುಕೊಂಡು ಆಸ್ತಿ ಹಂಚುವಂತೆ ಆಕೆಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ.

ದೌರ್ಜನ್ಯ ಎಸಗಿದಾಕಕೆಯನ್ನು ರೀಟಾ ಎಂದು ಗುರುತಿಸಲಾಗಿದ್ದು, ದೌರ್ಜನ್ಯಕ್ಕೆ ಒಳಗಾದ ತಾಯಿ ನಿರ್ಮಲಾ ದೇವಿ ಹಾಸಿಗೆ ಮೇಲೆ ಕುಳಿತು ಅಳುತ್ತಿರುವುದನ್ನು ಕಾಣಬಹುದಾಗಿದೆ.