ಸಾರಾಂಶ
ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿದ್ದ ದಯಾ ನಾಯಕ್ ಅವರನ್ನು ಹಿರಿಯ ಇನ್ಸ್‌ಪೆಕ್ಟರ್ ಆಗಿ ಪದೋನ್ನತಿ ನೀಡಲಾಗಿದೆ.
ಮುಂಬೈ: ಹಲವಾರು ಅಪರಾಧಿಗಳನ್ನು ಎನ್‌ಕೌಂಟರ್ ಮಾಡುವ ಮೂಲಕ ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತರಾಗಿರುವ ಕರ್ನಾಟಕ ಮೂಲದ ದಯಾ ನಾಯಕ್ ಅವರನ್ನು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಬಡ್ತಿ ನೀಡಲಾಗಿದೆ.
ಅಪರಾಧ ವಿಭಾಗದ 9ನೇ ಘಟಕದ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ದಯಾ ಅವರಿಗೆ ಉನ್ನತ ಶ್ರೇಣಿಯ ಬಡ್ತಿ ನೀಡಿರುವ ಹಾಗೂ ಮುಂಬೈ ಪೊಲೀಸ್ ಪಡೆಯ 22 ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ಕುರಿತು ಮಂಗಳವಾರ ಸರ್ಕಾರ ಆದೇಶ ಹೊರಡಿಸಿದೆ.ಈ ಹಿಂದೆ ಮೂರು ವರ್ಷಗಳ ಕಾಲ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಲ್ಲಿ ಕೆಲಸ ಮಾಡಿದ್ದ ದಯಾ ಅವರು ಕ್ರಿಮಿನಲ್‌ಗಳ ಎನ್‌ಕೌಂಟರ್‌ಗೆ ಹೆಸರುವಾಸಿಯಾಗಿದ್ದರು.