ಬಿಸಿಲ ಬೇಗೆ ಸುದ್ದಿ ಓದುವಾಗಲೇ ನಿರೂಪಕಿ ಮೂರ್ಛೆ!

| Published : Apr 22 2024, 02:21 AM IST / Updated: Apr 22 2024, 05:07 AM IST

ಸಾರಾಂಶ

ಬಿಪಿ ಏರಿ ಕುಸಿದ ಡಿಡಿ ನಿರೂಪಕಿ ಲೋಪಮುದ್ರಾರನ್ನು ಸಿಬ್ಬಂದಿ ಆರೈಕೆ ಮಾಡಿದ್ದಾರೆ.

ಕೋಲ್ಕತಾ: ದೇಶದೆಲ್ಲೆಡೆ ಬಿಸಿಲಿನ ತಾಪ ಜೋರಾಗಿದ್ದು ಜನರು ಹೈರಾಣಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಸಿ ತಾಪಮಾನ ನಡುವೆ ರಕ್ತದೊತ್ತಡದಿಂದ ಕುಸಿದು ಲೈವ್ ನಲ್ಲಿಯೇ ಸುದ್ದಿ ನಿರೂಪಕಿ ಮೂರ್ಛೆ ಹೋಗಿದ್ದಾರೆ. ಅದೂ ಹೀಟ್‌ವೇವ್‌ ಸುದ್ದಿ ಓದುವಾಗಲೇ ಘಟನೆ ನಡೆದಿದೆ.

ಬಂಗಾಳದ ಕೋಲ್ಕತಾ ಕೇಂದ್ರದ ದೂರದರ್ಶನ ನಿರೂಪಕಿ ಲೋಪಮುದ್ರಾ ಸಿನ್ಹಾ ಮೂರ್ಛೆ ಹೋದವರು. ಕೂಡಲೇ ಸಿಬ್ಬಂದಿ ಅವರತ್ತ ಧಾವಿಸಿ ಆರೈಕೆ ಮಾಡಿದ್ದಾರೆ. ಈ ಬಗ್ಗೆ ನಿರೂಪಕಿ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಸುದ್ದಿ ಓದುತ್ತಿರುವಾಗಲೇ ನನ್ನ ಬಿಪಿ ಕಡಿಮೆಯಾಯ್ತು. ಸುದ್ದಿಗೂ ಮುನ್ನವೇ ನನಗೆ ನಿತ್ರಾಣವಾಗಿತ್ತು. ಆದರೆ ನಾನು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನೀರು ಕುಡಿದರೆ ಸರಿ ಹೋಗುತ್ತದೆ ಎಂದು ಭಾವಿಸಿದ್ದೆ. ಆದ್ರೆ ನೀರು ಕುಡಿಯಲೂ ಸಮಯ ಸಿಕ್ಕಿರಲಿಲ್ಲ. ಹೀಗಾಗಿ ಸುದ್ದಿ ಓದುವಾಗ ಟೆಲಿಪ್ರಾಂಪ್ಟರ್‌ ಕೂಡ ಕತ್ತಲು ರೀತಿ ಗೋಚರಿಸಿತು. ಮೂರ್ಛೆ ಹೋದೆ’ ಎಂದು ಬರೆದುಕೊಂಡಿದ್ದಾರೆ.

ಪ. ಬಂಗಾಳದ ಬಹುತೇಕ ಕಡೆ ಈಗ 41 ಡಿಗ್ರಿ ತಾಪಮಾನವಿದೆ.