ಸಾರಾಂಶ
ಮ್ಯಾನ್ಮಾರ್‌ನಿಂದ ಅಂಡನ್ನಿನ ನಾರ್ಕೊಂಡಮ್ ದ್ವೀಪಕ್ಕೆ ಬೇಟೆಗೆ ಬಂದಿದ್ದವರ ಶವ ಪತ್ತೆಯಾಗಿದೆ.
ಪೋರ್ಟ್ ಬ್ಲೇರ್: ಮ್ಯಾನ್ಮಾರ್‌ನಿಂದ ಬಸವನ ಹುಳು ಮತ್ತು ಕಡಲ ಸೌತೆಯನ್ನು ಬೇಟೆಯಾಡಲು ಅಂಡಮಾನ್ ದ್ವೀಪಕ್ಕೆ ಬಂದಿದ್ದ ಆರು ಬೇಟೆಗಾರರು ಆಹಾರ ಸಿಗದೆ ನಾರ್ಕೊಂಡಮ್ ದ್ವೀಪದಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.
ಸಾವಿಗೆ ನಿಖರ ಕಾರಣ ಪತ್ತೆಯಾಗದಿದ್ದರೂ ಆಹಾರದ ಕೊರತೆ ಮತ್ತು ನಿರ್ಜಲೀಕರಣದ ಸಮಸ್ಯೆಯಿಂದ ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಕಡಲತಡಿಯಿಂದ ಕೆಲವೇ ದೂರದಲ್ಲಿ ಬಿದ್ದಿದ್ದ ಇವರ ಶವಗಳನ್ನು ಗುರುತಿಸಿದ ಅಧಿಕಾರಿಗಳು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವಿದೇಶಾಂಗ ಇಲಾಖೆಗೂ ತಿಳಿಸಿ ಮುಂದಿನ ಕ್ರಮ ಕೈಗೊಳ್ಳಲು ಸಚಿವಾಲಯ ಮ್ಯಾನ್ಮಾರ್ ಇಲಾಖೆಗೆ ಸೂಚಿಸಿದೆ.