ಸಾರಾಂಶ
ನವದೆಹಲಿ: ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ವೇಳೆ ತಳ್ಳಾಟ- ನೂಕಾಟ ನಡೆದಿದ್ದು, ಈ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರರ ವಿರುದ್ಧ ದೂರು- ಪ್ರತಿದೂರುಗಳನ್ನು ದಾಖಲಿಸಿವೆ. ಮಹತ್ವದ ಸಂಗತಿಯಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್ ಕೊಲೆ ಯತ್ನ ದೂರು ದಾಖಲಿಸಿದೆ.
ಬಿಜೆಪಿ ನಾಯಕ ಅನುರಾಗ್ ಠಾಕುರ್ ಮಾತನಾಡಿ, ‘ನಮ್ಮ ಮೇಲೆ ಆಕ್ರಮಣ ನಡೆಸಿದ ರಾಹುಲ್ ಗಾಂಧಿಯವರ ಮೇಲೆ ಕೊಲೆ ಯತ್ನ ದೂರು ದಾಖಲಿಸಿದ್ದೇವೆ. ಸೆಕ್ಷನ್ 109(ಹತ್ಯೆ ಯತ್ನ), 115, 117(ನೋವುಂಟುಮಾಡುವುದು), 125, 131 ಹಾಗೂ 351ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದರು.
ಕಾಂಗ್ರೆಸ್ ಪ್ರತಿದೂರು:
ಕಾಂಗ್ರೆಸ್ ಕೂಡ ಪ್ರತಿದೂರು ದಾಖಲಿಸಿದೆ. ‘ಸದನದ ಆವರಣದಲ್ಲಿ ಪ್ರತಿಭಟನೆ ವೇಳೆ ಬಿಜೆಪಿಯವರು ಕೋಲಾಹಲ ಸೃಷ್ಟಿಸಿದ್ದು, ಖರ್ಗೆ ಅವರನ್ನು ದೂಡಿದರು. ಇದರಿಂದ ಅವರ ಮೊಣಕಾಲಿಗೆ ಪೆಟ್ಟಾಯಿತು. ಇದರ ವಿರುದ್ಧ ದೂರು ದಾಖಲಿಸಿದ್ದೇವೆ’ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದರು.
ಬಿಜೆಪಿಗರು ತಳ್ಳಿದ್ದರಿಂದ ನನ್ನ ಕಾಲಿಗೆ ಗಾಯ: ಖರ್ಗೆ
ಪಿಟಿಐ ನವದೆಹಲಿಗುರುವಾರ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸಂಸದರ ನಡುವೆ ನಡೆದ ದೈಹಿಕ ಘರ್ಷಣೆಯ ನಂತರ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಸ್ಪೀಕರ್‌ಗೆ ದೂರು ನೀಡಿ, ‘ಬಿಜೆಪಿಗರು ತಳ್ಳಿದ್ದರಿಂದ ನನ್ನ ಕಾಲಿಗೆ ಗಾಯ ಆಗಿದೆ. ಈ ಇಡೀ ತಳ್ಳಾಟದ ಘಟನೆ ಬಗ್ಗೆ ತನಿಖೆ ನಡೆಸಬೇಕು’ ಎಂದು ಕೋರಿದ್ದಾರೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದ ಪತ್ರದ ಬರೆದಿರುವ ಖರ್ಗೆ ಅವರು ‘ಬಿಜೆಪಿ ಸಂಸದರು ನನ್ನನ್ನು ತಳ್ಳಿದರು. ಇದರಿಂದ ಇದು ಶಸ್ತ್ರಚಿಕಿತ್ಸೆಗೆ ಒಳಗಾದ ನನ್ನ ಮೊಣಕಾಲುಗಳ ಮೇಲೆ ಗಾಯವಾಗಿದೆ. ತರುವಾಯ, ಕಾಂಗ್ರೆಸ್ ಸಂಸದರು ನನಗೆ ಕುರ್ಚಿ ತಂದರು ಮತ್ತು ನನ್ನನ್ನು ಅದರ ಮೇಲೆ ಕೂರಿಸಿದರು. ಬಹಳ ಕಷ್ಟದಿಂದ ಮತ್ತು ನನ್ನ ಸಹೋದ್ಯೋಗಿಗಳ ಬೆಂಬಲದೊಂದಿಗೆ ನಾನು 11 ಗಂಟೆಗೆ ಸದನಕ್ಕೆ ಕುಂಟುತ್ತ ಹೊರಟೆ’ ಎಂದಿದ್ದಾರೆ.
ನನ್ನ ಜತೆ ರಾಹುಲ್ ಅಸಭ್ಯ ವರ್ತನೆ: ಬಿಜೆಪಿ ಸಂಸದೆ ಆರೋಪ
ನವದೆಹಲಿ : ನನ್ನ ಜತೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅಸಭ್ಯವಾಗಿ ನಡೆದುಕೊಂಡರು. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಬಿಜೆಪಿ ಸಂಸದೆ ಫಾಂಗ್ನಾನ್ ಕೊನ್ಯಾಕ್ ಆರೋಪಿಸಿದ್ದಾರೆ.ಸಂಸತ್ತಿನ ಹೊರಗೆ ಸಂವಿಧಾನ ಶಿಲ್ಪಿ ಡಾ। ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯ ಪರ-ವಿರುದ್ಧ ಆಡಳಿತ ಹಾಗೂ ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಾವು ಕಾಂಗ್ರೆಸ್ ವಿರುದ್ಧ ಪ್ರತಿಭಟಿಸುತ್ತಿದ್ದೆವು. ನಾನು ಇದ್ದ ಸ್ಥಳಕ್ಕೆ ಏಕಾಏಕಿ ನುಗ್ಗಿದ ರಾಹುಲ್ ಗಾಂಧಿ ನನಗೆ ತಾಗಿಕೊಂಡು ಅಸಭ್ಯವಾಗಿ ನಿಂತು ಘೋಷಣೆಗಳನ್ನು ಕೂಗದಂತೆ ಎಚ್ಚರಿಸಿದರು. ಅವರು ನನಗೆ ತಾಗಿಕೊಂಡು ನಿಂತಿದ್ದರಿಂದ ನನ್ನ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಕೊನ್ಯಾಕ್ ಆರೋಪಿಸಿದ್ದಾರೆ.
ಇದು ಸಳ್ಳು-ಕಾಂಗ್ರೆಸ್:ಫಾಂಗ್ನಾನ್ ಕೊನ್ಯಾಕ್ ಆರೋಪವನ್ನು ಕಾಂಗ್ರೆಸ್ ಸಂಸದ ಹೈಬಿ ಈಡನ್ ತಳ್ಳಿಹಾಕಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ, ‘ಕೊನ್ಯಾಕ್ ಆರೋಪವು ಸಂಪೂರ್ಣವಾಗಿ ಕಟ್ಟುಕಥೆ ಮತ್ತು ಸತ್ಯಗಳಿಂದ ದೂರವಾಗಿದೆ ಮತ್ತು ವಿರೋಧ ಪಕ್ಷದ ನಾಯಕನ ಪ್ರಾಮಾಣಿಕತೆಗೆ ಕುಂದು ತರುವ ದುರುದ್ದೇಶ ಹೊಂದಿದೆ’ ಎಂದಿದ್ದಾರೆ.