ದೆಹಲಿ ಅಬಕಾರಿ ಹಗರಣ: ಕೆಸಿಆರ್‌ ಪುತ್ರಿ ಕವಿತಾ ಏ.15ರವರೆಗೆ ಸಿಬಿಐ ವಶಕ್ಕೆ

| Published : Apr 13 2024, 01:08 AM IST / Updated: Apr 13 2024, 05:23 AM IST

ದೆಹಲಿ ಅಬಕಾರಿ ಹಗರಣ: ಕೆಸಿಆರ್‌ ಪುತ್ರಿ ಕವಿತಾ ಏ.15ರವರೆಗೆ ಸಿಬಿಐ ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

 ಅಬಕಾರಿ ನೀತಿ ಹಗರಣದಲ್ಲಿ ಬಂಧಿತ ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಅವರ ಪುತ್ರಿ, ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನು ಏ.15ರ ವರೆಗೆ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧಿತ ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಅವರ ಪುತ್ರಿ, ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನು ಏ.15ರ ವರೆಗೆ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ. 

ಗುರುವಾರ ಕವಿತಾರನ್ನು ಬಂಧಿಸಿದ್ದ ಸಿಬಿಐ, ಶುಕ್ರವಾರ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತನ್ನ ವಶಕ್ಕೆ ನೀಡುವಂತೆ ಕೋರಿತು. ಈ ಮನವಿ ಮನ್ನಿಸಿದ ಕೋರ್ಟ್‌ ಏ.15ರವರೆಗೂ ವಶಕ್ಕೆ ಒಪ್ಪಿಸಿತು . ಇದೇ ಪ್ರಕರಣ ಸಂಬಂಧ ಕವಿತಾರನ್ನು ಮಾ.15ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.