ಸಾರಾಂಶ
ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿದ್ದ ರ್‍ಯಾಟ್‌ಹೋಲ್ ಮೈನರ್ ಒಬ್ಬನ ಮನೆಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಧ್ವಂಸ ಮಾಡಿದೆ
ನವದೆಹಲಿ: ಉತ್ತರಾಖಂಡದ ಸಿಲ್‌ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಿದ ರ್‍ಯಾಟ್ ಹೋಲ್ ಮೈನರ್ಸ್‌ನ ಓರ್ವ ಸಿಬ್ಬಂದಿ ಮನೆಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಧ್ವಂಸಗೊಳಿಸಿದೆ. ಇದು ವಿವಾದಕ್ಕೀಡಾಗುತ್ತಿದ್ದಂತೆಯೇ ಪ್ರಾಯಶ್ಚಿತ್ತವಾಗಿ, ಹೊಸದಾಗಿ ಮನೆ ನಿರ್ಮಿಸಿಕೊಡಲಿದ್ದೇವೆ ಎಂಬ ಭರವಸೆ ನೀಡಿದೆ. ಆದರೆ ರ್‍ಯಾಟ್‌ಹೋಲ್ ಕಾರ್ಮಿಕ, ಈ ಆಫರ್ ತಿರಸ್ಕರಿಸಿದ್ದಾರೆ.
ವಕೀಲ್ ಹಸನ್ ಎಂಬ ಕಾರ್ಮಿಕರ ಮನೆಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಅಕ್ರಮ ಕಟ್ಟಡ ಎಂದು ಧ್ವಂಸಗೊಳಿಸಿದ್ದರು. ಬಳಿಕ ತಪ್ಪಿನ ಅರಿವಾಗಿ ಅಧಿಕಾರಿಗಳು ಹಸನ್ ಅವರಿಗೆ ತಾತ್ಕಾಲಿಕ ಮನೆ ಹಾಗೂ ಧ್ವಂಸಗೊಳಿಸಿದ ಜಾಗದಲ್ಲಿಯೇ ಹೊಸ ಮನೆಯನ್ನು ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಆದರೆ ಇದು ಕೇವಲ ಮೌಖಿಕ ಭರವಸೆ ಎಂದು ಹಸನ್ ತಿರಸ್ಕರಿಸಿದ್ದಾರೆ.