ದೆಹಲಿ ಮದ್ಯ ಹಗರಣ : ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ವಿಚಾರಣೆಗೆ ಗವರ್ನರ್‌ ಅನುಮತಿ

| Published : Dec 22 2024, 01:30 AM IST / Updated: Dec 22 2024, 04:45 AM IST

Arvind Kejriwal

ಸಾರಾಂಶ

ಮುಂದಿನ ವರ್ಷ ನಡೆಯಲಿರುವ ವಿಧಾನಸಬೆ ಚುನಾವಣೆಗೆ ದೆಹಲಿ ಸಜ್ಜಾಗುತ್ತಿರುವ ಹೊತ್ತಿನಲ್ಲೇ, ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಅನುಮತಿ ನೀಡಿದ್ದಾರೆ.

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ವಿಧಾನಸಬೆ ಚುನಾವಣೆಗೆ ದೆಹಲಿ ಸಜ್ಜಾಗುತ್ತಿರುವ ಹೊತ್ತಿನಲ್ಲೇ, ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಅನುಮತಿ ನೀಡಿದ್ದಾರೆ.

ಇದು ಆಪ್‌ಗೆ ಚುನಾವಣೆಯಲ್ಲಿ ತೊಡಕಾಗಿ ಪರಿಣಮಿಸು ಸಾಧ್ಯತೆಯಿದೆ. ಕೇಜ್ರಿವಾಲ್‌ ವಿಚಾರಣೆ ನಡೆಸಲು ಅನುಮತಿ ಕೋರಿ ಇ.ಡಿ. ಡಿ.5ರಂದು ದೆಹಲಿಯ ಮುಖ್ಯ ಕಾರ್ಯದರ್ಶಿ ಧರ್ಮೇಂದ್ರ ಅವರಿಗೆ ಮನವಿ ಮಾಡಿದ್ದು, ಅದಕ್ಕೀಗ ಒಪ್ಪಿಗೆ ದೊರಕಿದೆ. ಇದನ್ನು ಖಂಡಿಸಿರುವ ಆಪ್‌, ‘ದೂರು ದಾಖಲಾದ 1 ವರ್ಷದ ಬಳಿಕ ವಿಚಾರಣೆಗೆ ಅನುಮತಿ ದೊರಕಿರುವುದು, ಈ ಪ್ರಕರಣದಲ್ಲಿ ಇ.ಡಿ. ಕಠಿಣ ವರ್ತನೆ ತೋರಿಸುತ್ತದೆ. ಇದು ಪಕ್ಷಕ್ಕೆ ರಾಜಕೀಯವಾಗಿ ಕೆಡುಕುಂಟುಮಾಡುವ ಸಂಚಾಗಿದೆ.

 ನಿರ್ದೇಶನಾಲಯವು ಕಾರ್ಯವಿಧಾನದ ಎಲ್ಲಾ ಮಾನದಂಡಗಳನ್ನು ಉಲ್ಲಂಘಿಸಿ, ತನಿಖೆಯ ಹೆಸರಲ್ಲಿ ಶೋಷಣೆ ನಡೆಸುತ್ತಿದೆ. 2 ವರ್ಷದಿಂದ ತನಿಖೆ ನಡೆಸಿ, 500 ಅಧಿಕ ಜನರನ್ನು ಶೋಷಿಸಿ, 50000 ಪುಟಗಳ ಕಡತ ಸಿದ್ಧಪಡಿಸಿ, 250ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದರೂ ಇಡಿಗೆ ಏನೂ ದಕ್ಕಲಿಲ್ಲ. ಆಪ್‌ ಹಾಗೂ ಕೇಜ್ರಿವಾಲ್‌ರನ್ನು ತುಳಿಯುವುದೇ ಬಿಜೆಪಿಯ ಉದ್ದೇಶ’ ಎಂದು ಆರೋಪಿಸಿದೆ.

ಮದ್ಯ ಹಗರಣ ಪ್ರಕರಣದಲ್ಲಿ ಕೇಜ್ರಿವಾಲ್‌ ಹಾಗೂ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.