ಅಪ್‌ಗೆ 25 ಕೋಟಿ ರು. ನೀಡಿ: ಮದ್ಯ ಉದ್ಯಮಿಗೆ ಬೆದರಿಸಿದ್ದ ಕವಿತಾ

| Published : Apr 14 2024, 01:50 AM IST / Updated: Apr 14 2024, 06:44 AM IST

ಅಪ್‌ಗೆ 25 ಕೋಟಿ ರು. ನೀಡಿ: ಮದ್ಯ ಉದ್ಯಮಿಗೆ ಬೆದರಿಸಿದ್ದ ಕವಿತಾ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿಯಲ್ಲಿ ಮದ್ಯ ವ್ಯವಹಾರವನ್ನು ಅರಬಿಂದೋ ಕಂಪನಿಗೇ ನೀಡಿದ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ₹25 ಕೋಟಿ ನೀಡಬೇಕು ಅರಬಿಂದೋ ಕಂಪನಿಯ ಮುಖ್ಯಸ್ಥ ಶರತ್‌ಚಂದ್ರ ರೆಡ್ಡಿ ಅವರಿಗೆ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರು ಬೆದರಿಕೆ ಹಾಕಿದ್ದರು.

ನವದೆಹಲಿ: ದೆಹಲಿಯಲ್ಲಿ ಮದ್ಯ ವ್ಯವಹಾರವನ್ನು ಅರಬಿಂದೋ ಕಂಪನಿಗೇ ನೀಡಿದ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ₹25 ಕೋಟಿ ನೀಡಬೇಕು ಅರಬಿಂದೋ ಕಂಪನಿಯ ಮುಖ್ಯಸ್ಥ ಶರತ್‌ಚಂದ್ರ ರೆಡ್ಡಿ ಅವರಿಗೆ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರು ಬೆದರಿಕೆ ಹಾಕಿದ್ದರು ಎಂದು ಸಿಬಿಐ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

‘ದೆಹಲಿಯಲ್ಲಿ ಐದು ರೀಟೇಲ್‌ ಪ್ರಾಂತ್ಯಗಳ ವ್ಯವಹಾರವನ್ನು ಸರ್ಕಾರದಿಂದ ಅರಬಿಂದೋ ಕಂಪನಿಗೆ ನೀಡಿದಕ್ಕಾಗಿ ತಲಾ 5 ಕೋಟಿ ರು.ಯಂತೆ 25 ಕೋಟಿ ರು.ಯನ್ನು ಆಪ್‌ ಪಕ್ಷಕ್ಕೆ ವಿಜಯ್‌ ನಾಯರ್‌ ಎಂಬುವವರ ಮೂಲಕ ನೀಡಬೇಕೆಂದು ಕವಿತಾ ಅವರು ಶರತ್‌ ಚಂದ್ರ ರೆಡ್ಡಿ ಅವರಿಗೆ ಸೂಚಿಸಿದ್ದರು. ಒಂದು ವೇಳೆ ನೀಡದಿದ್ದರೆ ತೆಲಂಗಾಣ ಹಾಗೂ ದಿಲ್ಲಿಯಲ್ಲಿನ ಅರಬಿಂದೋ ಕಂಪನಿ ವ್ಯವಹಾರ ಹಾಳು ಮಾಡುವುದಾಗಿ ಬೆದರಿಸಿದ್ದರು’ ಎಂದು ಸಿಬಿಐ ತಿಳಿಸಿದೆ.

ಶರತ್‌ಚಂದ್ರ ರೆಡ್ಡಿ ಅವರು ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, 2021ರಲ್ಲಿ ಪ್ರಕರಣದ ಸಂಬಂಧ ಕವಿತಾ ಅವರಿಗೆ 2 ಕಂತುಗಳಲ್ಲಿ ತಲಾ 7 ಕೋಟಿ ರು. ಲಂಚ ನೀಡಿದ್ದಾಗಿ ಒಪ್ಪಿಕೊಂಡಿದ್ದರು.