ಸಾರಾಂಶ
ಶಾಲೆಯಲ್ಲಿ ಶಿಕ್ಷಕರ ನಿಂದನೆಯಿಂದ ಮನನೊಂದು ಮನನೊಂದು 10ನೇ ತರಗತಿಯ ವಿದ್ಯಾರ್ಥಿಯೋರ್ವ ದೆಹಲಿ ಮೆಟ್ರೋ ನಿಲ್ದಾಣಕ್ಕೆ ತೆರಳಿ ಹಳೆ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಶೌರ್ಯ ಪಾಟೀಲ್(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
ನವದೆಹಲಿ: ಶಾಲೆಯಲ್ಲಿ ಶಿಕ್ಷಕರ ನಿಂದನೆಯಿಂದ ಮನನೊಂದು ಮನನೊಂದು 10ನೇ ತರಗತಿಯ ವಿದ್ಯಾರ್ಥಿಯೋರ್ವ ದೆಹಲಿ ಮೆಟ್ರೋ ನಿಲ್ದಾಣಕ್ಕೆ ತೆರಳಿ ಹಳೆ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಶೌರ್ಯ ಪಾಟೀಲ್(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಮರಣಪತ್ರದಲ್ಲಿ ‘ಶಿಕ್ಷಕರು ಕೊಡುತ್ತಿದ್ದ ಹಿಂಸೆಯನ್ನು ತಾಳಲಾಗದೆ ಇಂಥಹ ನಿರ್ಧಾರಕ್ಕೆ ಬರಬೇಕಾಯಿತು. ಅಪ್ಪ, ಅಮ್ಮ, ಸಹೋದರ, ಕ್ಷಮಿಸಿ’ ಎಂದು ಬರೆದಿರುವ ಶೌರ್ಯ, ಸೆಂಟ್ ಕೊಲಂಬಾ ಶಾಲೆಯ ಶಿಕ್ಷಕರಿಂದ ನನಗಾದಂತೆ ಯಾವ ವಿದ್ಯಾರ್ಥಿಯೂ ಆಗಬಾರದು. ಅದಕ್ಕಾಗಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾನೆ. ಇದೇ ಪತ್ರದಲ್ಲಿ, ‘ಸಾವಿನ ಬಳಿಕ ನನ್ನ ಯಾವುದಾದರೂ ಅಂಗ ಸರಿಯಿದ್ದರೆ, ಅವುಗಳ ಅಗತ್ಯವಿದ್ದವರಿಗೆ ದಾನ ಮಾಡಿ’ ಎಂದು ಬರೆದಿದ್ದಾನೆ.ಈತ 6 ತಿಂಗಳಿಂದ ಶಾಲೆಯಲ್ಲಿ ಹಿಂಸೆ ಅನುಭವಿಸುತ್ತಿದ್ದು, ಗುರುವಾರ ನೃತ್ಯ ಮಾಡುವಾಗ ಬಿದ್ದದ್ದಕ್ಕೆ ಶಿಕ್ಷಕರಿಂದ ಮೂದಿಸಲ್ಪಟ್ಟಿದ್ದ ಎನ್ನಲಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))