ದೆಹಲಿಯಲ್ಲಿ ಅಪಾಯಮಟ್ಟ ಮೀರಿದ ಯಮುನೆ

| Published : Sep 03 2025, 01:01 AM IST

ಸಾರಾಂಶ

ಸತತ 2 ದಿನಗಳಿಂದ ರಾಜಧಾನಿ ದೆಹಲಿಯಲ್ಲಿ ಭೀಕರವಾಗಿ ಮಳೆ ಸುರಿಯುತ್ತಿದ್ದು, ಸಾಮಾನ್ಯ ಜನಜೀವನವನ್ನು ಪೂರ್ಣ ಅಸ್ತವ್ಯಸ್ಥಗೊಳಿಸಿದೆ. ಈ ನಡುವೆ ವಜೀರಾಬಾದ್‌ ಮತ್ತು ಹಾಥ್ನಿಕುಂಡ್‌ ಬ್ಯಾರೇಜ್‌ಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ ಕಾರಣ ಯಮುನಾ ನದಿ ಉಕ್ಕೇರಿ ಹರಿಯುತ್ತಿದೆ.

ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ । ಋತುವಿನಲ್ಲಿ 1000 ಮಿ.ಮೀ ದಾಟಿದ ಮಳೆನವದೆಹಲಿ: ಸತತ 2 ದಿನಗಳಿಂದ ರಾಜಧಾನಿ ದೆಹಲಿಯಲ್ಲಿ ಭೀಕರವಾಗಿ ಮಳೆ ಸುರಿಯುತ್ತಿದ್ದು, ಸಾಮಾನ್ಯ ಜನಜೀವನವನ್ನು ಪೂರ್ಣ ಅಸ್ತವ್ಯಸ್ಥಗೊಳಿಸಿದೆ. ಈ ನಡುವೆ ವಜೀರಾಬಾದ್‌ ಮತ್ತು ಹಾಥ್ನಿಕುಂಡ್‌ ಬ್ಯಾರೇಜ್‌ಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ ಕಾರಣ ಯಮುನಾ ನದಿ ಉಕ್ಕೇರಿ ಹರಿಯುತ್ತಿದೆ.

ಪರಿಣಾಮ ನಗರದ ಬಹುತೇಕ ಕಡೆಗಳಲ್ಲಿ ಯಮುನಾ ನದಿ ಉಕ್ಕೇರಿ ಅಪಾಯದ ಮಟ್ಟ (206 ಮೀಟರ್‌) ಮೀರಿ ಹರಿಯುತ್ತಿದೆ. ಹೀಗಾಗಿ ತಗ್ಗು ಪ್ರದೇಶಗಳಲ್ಲಿನ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ದಾಖಲೆ ಮಳೆ: ದೆಹಲಿಯಲ್ಲಿ ವಾರ್ಷಿಕ ಸರಾಸರಿ 774 ಮಿ.ಮೀ ಮಳೆ ಸುರಿಯುತ್ತದೆ. ಆದರೆ ಕಳೆದ ತಿಂಗಳೇ ಈ ಪ್ರಮಾಣ ಮೀರಿ ಮಳೆಯಾಗಿತ್ತು. ಇದೀಗ ಬೀಳುತ್ತಿರುವ ಮಳೆಯೂ ಸೇರಿ ರಾಜಧಾನಿಯಲ್ಲಿ ಸುರಿದ ಮಳೆ ಪ್ರಮಾಣ 1000 ಮಿ.ಮೀ ದಾಟಿದೆ.

ಮುಖ್ಯಮಂತ್ರಿ ರೇಖಾ ಗುಪ್ತಾ ಯಮುನಾ ತೀರದ ಪ್ರದೇಶಗಳಿಗೆ ಭೇಟಿಯಿತ್ತು, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರ ಸರ್ವಸಿದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.