ಜೀವವಿಮೆ ಮೇಲೆ ಜಿಎಸ್‌ಟಿ ರದ್ದತಿ ಇಲ್ಲ: ಗಡ್ಕರಿ, ಪ್ರತಿಪಕ್ಷ ಮನವಿ ತಿರಸ್ಕರಿಸಿದ ಕೇಂದ್ರ

| Published : Aug 08 2024, 01:33 AM IST / Updated: Aug 08 2024, 05:19 AM IST

ಸಾರಾಂಶ

ಆರೋಗ್ಯ ಹಾಗೂ ಜೀವವಿಮೆ ಮೇಲಿನ ಸರಕು-ಸೇವಾ ತೆರಿಗೆ (ಜಿಎಸ್ಟಿ) ತೆಗೆದು ಹಾಕಬೇಕು ಎಂಬ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹಾಗೂ ಪ್ರತಿಪಕ್ಷಗಳ ಬೇಡಿಕೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪರೋಕ್ಷವಾಗಿ ತಳ್ಳಿಹಾಕಿದ್ದಾರೆ

ನವದೆಹಲಿ: ಆರೋಗ್ಯ ಹಾಗೂ ಜೀವವಿಮೆ ಮೇಲಿನ ಸರಕು-ಸೇವಾ ತೆರಿಗೆ (ಜಿಎಸ್ಟಿ) ತೆಗೆದು ಹಾಕಬೇಕು ಎಂಬ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹಾಗೂ ಪ್ರತಿಪಕ್ಷಗಳ ಬೇಡಿಕೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪರೋಕ್ಷವಾಗಿ ತಳ್ಳಿಹಾಕಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ಆರೋಗ್ಯ ಮತ್ತು ಜೀವ ವಿಮೆಯ ಮೇಲಿನ ಜಿಎಸ್‌ಟಿ ವಿರುದ್ಧ ಇಂದು 200 ವಿಪಕ್ಷ ಸಂಸದರು ಪ್ರತಿಭಟಿಸಿದ್ದಾರೆ. ಆದರೆ ಜಿಎಸ್‌ಟಿ ಜಾರಿಗೂ ಮೊದಲೇ ವೈದ್ಯಕೀಯ ವಿಮೆ ಮೇಲೆ ತೆರಿಗೆ ಇತ್ತು. ಇದು ಹೊಸ ವಿಷಯವಲ್ಲ. ರಾಜ್ಯಗಳಲ್ಲೂ ತೆರಿಗೆ ಇತ್ತು. ಇಲ್ಲಿ ಪ್ರತಿಭಟಿಸುವವರು ತೆರಿಗೆ ರದ್ದತಿಗೆ ರಾಜ್ಯಗಳನ್ನು ಒತ್ತಾಯಿಸಿದ್ದಾರಾ? ಕಾಂಗ್ರೆಸ್‌ ಹಾಗೂ ಆಪ್‌ನ ರಾಜ್ಯ ಹಣಕಾಸು ಸಚಿವರು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಜೀವವಿಮಾ ಜಿಎಸ್‌ಟಿ ವಿರೋಧಿಸಿರಲಿಲ್ಲ ಏಕೆ?’ ಎಂದು ಪ್ರಶ್ನಿಸಿದರು.