ಸಾರಾಂಶ
ಇಂಡಿಯಾ ಕೂಟಕ್ಕೆ ಬಿಜೆಪಿ ಮತ್ತು ಅಧೀರ್ ಶತ್ರುಗಳು ಎಂದು ಟಿಂಸಿಯ ಉಚ್ಛಾಟಿತ ರಾಜ್ಯಸಭಾ ಸಂಸದ ಡೆರಿಕ್ ಓಬ್ರಿಯೆನ್ ಆರೋಪ ಮಾಡಿದ್ದಾರೆ.
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಮುರಿಯಲು ಅಧೀರ್ ರಂಜನ್ ಚೌಧರಿಯೇ ಕಾರಣ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಓಬ್ರಿಯಾನ್ ಟೀಕಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜೊತೆಗೆ ಟಿಎಂಸಿ ಮೈತ್ರಿ ಮುರಿದುಕೊಳ್ಳಲು ಮೂರು ಕಾರಣಗಳೆಂದರೆ ಅದು ಅಧೀರ್, ಅಧೀರ್ ಮತ್ತು ಅಧೀರ್. ಇಂಡಿಯಾ ಕೂಟಕ್ಕೆ ಇರುವ ಇಬ್ಬರೇ ಶತ್ರುಗಳೆಂದರೆ ಅದು ಬಿಜೆಪಿ ಮತ್ತು ಅಧೀರ್ ರಂಜನ್ ಚೌಧರಿ.ಅವರು ಬಿಜೆಪಿಯ ಕುರಿತು ಕೆಲವೇ ಕಡೆ ಮಾತನಾಡಿದರೆ, ಟಿಎಂಸಿಯ ಕುರಿತು ಪ್ರತಿಕ್ಷಣವೂ ಆರೋಪ ಮಾಡುತ್ತಿರುತ್ತಾರೆ. ಇದರಿಂದಾಗಿ ಮೈತ್ರಿ ಸಾಧ್ಯವಾಗಲಿಲ್ಲ’ ಎಂದು ತಿಳಿಸಿದರು.
ಬುಧವಾರವಷ್ಟೇ ಟಿಎಂಸಿ ನಾಯಕಿ ಮಮತಾಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಲೋಕಸಭಾ ಚುನಾವಣೆಗೆ ಏಕಾಂಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದರು.