ಟೆಹ್ರಾನ್‌: 4ನೇ ವಾರಕ್ಕೆ ಕಾಲಿಟ್ಟಿರುವ ಮಧ್ಯಪ್ರಾಚ್ಯ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 5 ದಿನ ತಡೆ ನೀಡಿದ್ದರೂ, ಕೊಲ್ಲಿ ದೇಶಗಳು, ಇಸ್ರೇಲ್‌ ಮೇಲೆ ಮಂಗಳವಾರವೂ ಇರಾನ್‌ ತನ್ನ ದಾಳಿ ಮುಂದುವರೆಸಿದೆ. ಮತ್ತೊಂದೆಡೆ ಇರಾನ್‌ ಜೊತೆಗೆ ಮಾತುಕತೆಗೆ ಟ್ರಂಪ್‌ ಹಲವು ಷರತ್ತುಗಳನ್ನು ಹಾಕಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕದ ಕೆಲವು ಕಠಿಣ ಷರತ್ತುಗಳನ್ನು ಬದಿಗಿಟ್ಟು ಮಾತುಕತೆಗೆ ತಾವು ಸಿದ್ಧ ಎಂಬ ಸಂದೇಶವನ್ನು ಇರಾನ್‌ನ ನೂತನ ಪರಮೋಚ್ಚ ಧಾರ್ಮಿಕ ನಾಯಕ ಮೊಜ್ತಬಾ ಖಮೇನಿ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಟ್ರಂಪ್‌ ನೀಡಿದ್ದ 5 ದಿನಗಳ ಗಡುವಿನೊಳಗೆ ಸಂಘರ್ಷಕ್ಕೆ ತೆರೆ ಬೀಳುವ ಸಣ್ಣ ಸುಳಿವುಗಳು ಕಾಣಸಿಕ್ಕಿವೆ.

ಇರಾನ್ ದಾಳಿ:

ಟ್ರಂಪ್‌ ಕದನವಿರಾಮಕ್ಕೆ ಕಿವಿಗೊಡದೇ ಯುಎಇ, ಬಹ್ರೇನ್‌, ಲೆಬನಾನ್‌, ಕುವೈಟ್‌, ಇಸ್ರೇಲ್, ಸೌದಿ ಅರೇಬಿಯಾ ಸೇರಿ ಹಲವು ಮಧ್ಯಪ್ರಾಚ್ಯ ದೇಶಗಳ ಮೇಲೆ ಮಂಗಳವಾರ ದಾಳಿ ಮಾಡಿದೆ. ‘ಪೂರ್ಣ ವಿಜಯ ಸಿಗುವ ತನಕ ಇರಾನ್‌ ಹೋರಾಟ ಮಾಡುತ್ತದೆ’ ಎಂದು ಇರಾನ್‌ ಸೇನಾ ವಕ್ತಾರ ಮೇ। ಜ। ಅಲಿ ಅಬ್ದೊಲ್ಲಾಹಿ ಅಲಿಯಾಬಾದಿ ಹೇಳಿದ್ದಾರೆ.

ಅಮೆರಿಕ ಷರತ್ತಿಗೆ ಒಪ್ಪುವುದು ಅನುಮಾನ?:

ಈ ನಡುವೆ, ಖಮೇನಿ ಅವರು ಮಾತುಕತೆಗೆ ಒಪ್ಪಿದ್ದರೂ ಅಮೆರಿಕದ ಷರತ್ತಿಗೆ ಅವರು ಒಪ್ಪುವ ಸಾಧ್ಯತೆ ಅನುಮಾನ ಎನ್ನಲಾಗಿದೆ.

‘ಇರಾನ್‌ ಅಣ್ವಸ್ತ್ರ ಯೋಜನೆ ನಿಲ್ಲಿಸಿ ಪರಮಾಣು ಸ್ಥಾವರಗಳನ್ನು ಶಾಂತಿಯ ಉದ್ದೇಶಕ್ಕೆ ಬಳಸಲು ಒಪ್ಪಬೇಕು. ಇದರ ಮೇಲೆ ಅಂತಾರಾಷ್ಟ್ರೀಯ ನಿಗಾ ಇಡಬೇಕು ಹಾಗೂ ಹೋರ್ಮುಜ್‌ ಜಲಸಂಧಿಯ ಮೇಲೆ ಹಕ್ಕು ಸಾಧಿಸಬಾರದು. ಇರಾನ್‌-ಅಮೆರಿಕ ಜಂಟಿ ಕಣ್ಗಾವಲಿನಲ್ಲಿ ಜಲಸಂಧಿ ಇರಬೇಕು’ ಎಂಬ ಷರತ್ತುಗಳನ್ನು ಅಮೆರಿಕ ವಿಧಿಸುವ ಸಾಧ್ಯತೆ ಇದೆ. ಇದಕ್ಕೆ ಖಮೇನಿ ಒಪ್ಪುವ ಸಾಧ್ಯತೆ ಇಲ್ಲ ಎಂದೂ ವರದಿಗಳು ಹೇಳಿವೆ.

ಹಲವು ದೇಶಗಳ ಮೇಲೆ ಇರಾನ್‌ ದಾಳಿ:

ಬಹ್ರೇನ್‌ ಮೇಲಿನ ಇರಾನ್‌ ದಾಳಿಯಲ್ಲಿ ಓರ್ವ ಮೊರಕ್ಕೋ ಗುತ್ತಿಗೆದಾರ ಬಲಿಯಾಗಿದ್ದರೆ, ಐವರು ಯುಎಇ ನಾಗರಿಕರಿಗೆ ಗಾಯಗಳಾಗಿವೆ. ಸೌದಿ ಅರೇಬಿಯಾ ಮೇಲೂ ದಾಳಿಯಾಗಿದ್ದು, 19 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಅಲ್ಲಿನ ರಕ್ಷಣಾ ಇಲಾಖೆ ಹೇಳಿದೆ.

ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ ಮೇಲೆ ಇರಾನ್‌ ಭೀಕರ ಕ್ಷಿಪಣಿ ದಾಳಿ ಮಾಡಿದೆ. ಇಸ್ರೇಲ್‌ನ ವಾಯುರಕ್ಷಣಾ ವ್ಯವಸ್ಥೆ ಇವುಗಳಲ್ಲಿ ಕೆಲವನ್ನು ತಡೆಯುವಲ್ಲಿ ವಿಫಲವಾಗಿದ್ದು, ಅದು ನಗರದ ಮಧ್ಯಭಾಗಕ್ಕೆ ಅಪ್ಪಳಿಸಿದೆ. ಪರಿಣಾಮ ಹತ್ತಿರದ ಹಲವು ಮನೆಗಳಿಗೆ ಹಾನಿಯಾಗಿದೆ. ಕುವೈತ್‌ನಲ್ಲಿ ವಿದ್ಯುತ್‌ ತಂತಿಯೊಂದು ದಾಳಿಗೆ ಗುರಿಯಾಗಿದ್ದು, ಹಲವು ಗಂಟೆಗಳ ಕಾಲ ಆ ಪ್ರದೇಶದ ಜನರನ್ನು ಕತ್ತಲಿಗೆ ದೂಡಿತ್ತು. 

ವಿರಾಮಕ್ಕೆ ಪಾಕ್‌ ಮಧ್ಯಸ್ಥಿಕೆ?