ಸಾರಾಂಶ
ಇಲ್ಲಿನ ರಾಮ ಮಂದಿರಕ್ಕೆ ಮಧ್ಯಪ್ರದೇಶದ ಭಕ್ತರು 1.75 ಕೇಜಿ ತೂಕದ 108 ಕಡ್ಡಿಗಳನ್ನು ಹೊಂದಿರುವ ಬೆಳ್ಳಿ ಪೊರಕೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಯೋಧ್ಯೆ: ಇಲ್ಲಿನ ರಾಮ ಮಂದಿರಕ್ಕೆ ಮಧ್ಯಪ್ರದೇಶದ ಭಕ್ತರು 1.75 ಕೇಜಿ ತೂಕದ 108 ಕಡ್ಡಿಗಳನ್ನು ಹೊಂದಿರುವ ಬೆಳ್ಳಿ ಪೊರಕೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಖಿಲ ಭಾರತ ಮಾಂಗ್ ಸಮಾಜ ಈ ಉಡುಗೊರೆಯನ್ನು ನೀಡಿದ್ದು, ಇದನ್ನು ತಯಾರಿಸಲು 11 ದಿನಗಳ ಸಮಯ ಹಿಡಿದಿದೆ. ಪೊರಕೆಯ ಮೇಲ್ಭಾಗದಲ್ಲಿ ಲಕ್ಷ್ಮೀ ದೇವಿಯ ವಿಗ್ರಹವಿದ್ದು, ಇದನ್ನು ದೇಗುಲದ ಗರ್ಭಗುಡಿ ಸ್ವಚ್ಛತೆಗೆ ಬಳಸುವಂತೆ ಟ್ರಸ್ಟ್ ಬಳಿ ಮಾಂಗ್ ಸಮಾಜ ವಿನಂತಿಸಿದೆ.
ಈ ಬಗ್ಗೆ ಮಾತನಾಡಿರುವ ಸಮಾಜ ಸದಸ್ಯ ಮಧುಕರ್ ರಾವ್, ‘ಜ.22 ಇಡೀ ದೇಶವೇ ದೀಪಾವಳಿ ಆಚರಿಸಿದೆ. ನಾವು ಪೊರಕೆಯನ್ನು ಲಕ್ಷ್ಮಿ ಎಂದು ಸಂಬೋಧಿಸುತ್ತೇವೆ.
ಜೊತೆಗೆ ಲಕ್ಷ್ಮಿಯನ್ನು ದೀಪಾವಳಿಯಲ್ಲಿ ಆರಾಧಿಸುತ್ತೇವೆ. ಹೀಗಾಗಿ ಪೊರಕೆಯ ಮೇಲೆ ಲಕ್ಷ್ಮೀ ದೇವಿ ವಿಗ್ರಹ ನಿರ್ಮಿಸಿದ್ದೇವೆ’ ಎಂದು ಹೇಳಿದ್ದಾರೆ.