ತಿರುಮಲ (ಆಂಧ್ರ ಪ್ರದೇಶ): ವರ್ಷಾಂತ್ಯ ಮತ್ತು ಸರಣಿ ರಜೆ ಹಿನ್ನೆಲೆ ಇಲ್ಲಿಯ ಪವಿತ್ರ ವೆಂಕಟೇಶ್ವರನ ದೇವಸ್ಥಾನ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಸರ್ವದರ್ಶನಕ್ಕೆ (ಟಿಕೆಟ್‌ ಇಲ್ಲದೇ ದರ್ಶನ) 20 ತಾಸು ಕಾಯುವಂತಾಗಿದೆ.

ತಿರುಮಲ (ಆಂಧ್ರ ಪ್ರದೇಶ): ವರ್ಷಾಂತ್ಯ ಮತ್ತು ಸರಣಿ ರಜೆ ಹಿನ್ನೆಲೆ ಇಲ್ಲಿಯ ಪವಿತ್ರ ವೆಂಕಟೇಶ್ವರನ ದೇವಸ್ಥಾನ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಸರ್ವದರ್ಶನಕ್ಕೆ (ಟಿಕೆಟ್‌ ಇಲ್ಲದೇ ದರ್ಶನ) 20 ತಾಸು ಕಾಯುವಂತಾಗಿದೆ.

ಭಕ್ತರ ಈ ಸುದೀರ್ಘ ಸಾಲನ್ನು ತಪ್ಪಿಸಲು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ (ಟಿಟಿಡಿ) ಅಧಿಕಾರಿಗಳು ವಿಶೇಷ ದರ್ಶನ ಟಿಕೆಟ್‌ ನೀಡುತ್ತಿದ್ದರೂ, ವಿಶೇಷ ದರ್ಶನಕ್ಕೆ 5 ತಾಸು ಕಾಯಬೇಕಿದೆ.

ಶನಿವಾರ ಮಧ್ಯರಾತ್ರಿ ವರೆಗೆ ದೇಗುಲಕ್ಕೆ ಈ ಹಬ್ಬದ ಋತುವಿನಲ್ಲಿ 78,414 ಮಂದಿ ಭೇಟಿ ನೀಡಿದ್ದಾರೆ. ಇದು ಸಾಮಾನ್ಯ ದಿನಕ್ಕಿಂತ 10-15 ಸಾವಿರ ಅಧಿಕ. ಅದರಲ್ಲಿ 26,100 ಮಂದಿ ದೇವರಿಗೆ ಮುಡಿ ಅರ್ಪಿಸಿದ್ದಾರೆ. ಈ ಅವಧಿಯಲ್ಲಿ 3.45 ಕೋಟಿ ರು. ಕಾಣಿಕೆ ಸಂಗ್ರಹವಾಗಿದೆ.

ಭಾರಿ ಸಂಖ್ಯೆಯ ಭಕ್ತರ ಆಗಮನದಿಂದ ದೇಗುಲದ ಆವರಣದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿದೆ.