ರನ್‌ವೇ ಬಳಿ ತಿಂಡಿ: ಇಂಡಿಗೋಗೆ ₹1.2 ಕೋಟಿ ದಂಡ, ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೂ ₹80 ಲಕ್ಷ ದಂಡ

| Published : Jan 18 2024, 02:02 AM IST / Updated: Jan 18 2024, 05:18 PM IST

ಸಾರಾಂಶ

ಪ್ರತಿಕೂಲ ಹವಾಮಾನದ ಪರಿಣಾಮ ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಪ್ರಯಾಣಿಕರು ರಸ್ತೆಯಲ್ಲೇ ವಿರಮಿಸಿದ್ದಕ್ಕೆ ಸಂಬಂಧಿಸಿದಂತೆ ವಿಮಾನ ಸುರಕ್ಷತಾ ಪ್ರಾಧಿಕಾರ ಇಂಡಿಗೋ ಸಂಸ್ಥೆಗೆ ಬರೋಬ್ಬರಿ 1.2 ಕೋಟಿ ರು. ದಂಡ ವಿಧಿಸಿದೆ.

ನವದೆಹಲಿ: ಪ್ರತಿಕೂಲ ಹವಾಮಾನದ ಪರಿಣಾಮ ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಪ್ರಯಾಣಿಕರು ರಸ್ತೆಯಲ್ಲೇ ವಿರಮಿಸಿದ್ದಕ್ಕೆ ಸಂಬಂಧಿಸಿದಂತೆ ವಿಮಾನ ಸುರಕ್ಷತಾ ಪ್ರಾಧಿಕಾರ ಇಂಡಿಗೋ ಸಂಸ್ಥೆಗೆ ಬರೋಬ್ಬರಿ 1.2 ಕೋಟಿ ರು. ದಂಡ ವಿಧಿಸಿದೆ.

ಅಲ್ಲದೆ ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೂ ವಿಮಾನ ಸುರಕ್ಷತಾ ಪ್ರಾಧಿಕಾರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ ಕ್ರಮವಾಗಿ 60 ಲಕ್ಷ ರು. ಮತ್ತು 30 ಲಕ್ಷ ರು. ದಂಡ ವಿಧಿಸಿವೆ.

ಇನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯದ ನಿಯಮಾವಳಿಗಳನ್ನು ಉಲ್ಲಂಘಿಸದ ಕಾರಣ ನೀಡಿ ಪ್ರತ್ಯೇಕ ಪ್ರಕರಣಗಳಲ್ಲಿ ಏರ್‌ ಇಂಡಿಯಾ, ಸ್ಪೈಸ್‌ಜೆಟ್‌ ಮತ್ತು ಇಂಡಿಗೊ ವಿಮಾನ ಸಂಸ್ಥೆಗಳಿಗೆ ತಲಾ 30 ಲಕ್ಷ ರು. ದಂಡ ವಿಧಿಸಿವೆ.

ಏನಿದು ಪ್ರಕರಣ?ದಟ್ಟ ಮಂಜು ಆವರಿಸಿದ ಪರಿಣಾಮ ಭಾನುವಾರ ದೇಶಾದ್ಯಂತ ದೆಹಲಿಯೂ ಸೇರಿದಂತೆ ಹಲವು ಕಡೆ 100ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿ ಹೊರಟಿದ್ದವು. 

ಕಾಯುವಿಕೆಯ ಸಮಯದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ರನ್‌ವೇ ಮೇಲೆ ಪ್ರಯಾಣಿಕರು ಕುಳಿತು ಆಹಾರ ತಿನ್ನುತ್ತಿದ್ದ ದೃಶ್ಯ ವೈರಲ್‌ ಆಗಿತ್ತು.

ನಂತರ ವಿಮಾನ ಸುರಕ್ಷತಾ ಪ್ರಾಧಿಕಾರ ವಿಮಾನ ಸಂಸ್ಥೆ ಮತ್ತು ವಿಮಾನ ನಿಲ್ದಾಣಕ್ಕೆ ಮಂಗಳವಾರ ಬೆಳಗ್ಗೆ ಶೋಕಾಸ್‌ ನೀಡಿತ್ತು. ಅದಕ್ಕೆ ಕೊಟ್ಟ ಸ್ಪಷ್ಟೀಕರಣ ತೃಪ್ತಿಕರವಾಗಿಲ್ಲದ ಕಾರಣರುಭಯ ಸಂಸ್ಥೆಗಳಿಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ.