ಸಾರಾಂಶ
ಹೈದರಾಬಾದ್: ವಂಚಕರು ಮಾಡುವ ಡಿಜಿಟಲ್ ಅರೆಸ್ಟ್‌ನಿಂದ ಪಾರಾಗುವುದು ಹೇಗೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿವರಿಸುವಾಗ ಕರ್ನಾಟಕದ ಸಂತೋಷ ಪಾಟೀಲ್ ಎಂಬುವರ ವಿಡಿಯೋ ಸಂಭಾಷಣೆಯನ್ನು ಉದಾಹರಿಸಿದ್ದಾರೆ.
ಈ ವಿಡಿಯೋ ಸಂಭಾಷಣೆಯನ್ನು ಟ್ವೀಟ್ ಮಾಡಿದ್ದು ಕನ್ನಡಿಗ ಐಪಿಎಸ್ ಅಧಿಕಾರಿ, ತೆಲಂಗಾಣದ ಟಿಜಿಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಸಿ. ಸಜ್ಜನರ್ ಎಂಬುದು ವಿಶೇಷ.
ಈ ಬಗ್ಗೆ ಟ್ವೀಟ್ ಮಾಡಿರುವ ಸಜ್ಜನರ್, ‘ಸೆ.19 ರಂದು ಕರ್ನಾಟಕದ ವಿಜಯಪುರದ ಸಂತೋಷ ಪಾಟೀಲ್ ಎಂಬ ವ್ಯಕ್ತಿ ನಕಲಿ ಪೊಲೀಸರೊಂದಿಗೆ ನನ್ನ ಎಕ್ಸ್ ಖಾತೆಯಲ್ಲಿ ನಡೆಸಿದ ಸಂಭಾಷಣೆಯನ್ನು ಮೊದಲು ಪೋಸ್ಟ್ ಮಾಡಿದ್ದೆ.
ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಭಾಗವಾಗಿ ಮಾಡಿದ ಆ ಟ್ವೀಟ್ ಮಾಡಿದ್ದೆ. ಅದನ್ನು ಗುರುತಿಸಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸಂತೋಷ್ ಪಾಟೀಲ್ ಅವರ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ’ ಎಂದಿದ್ದಾರೆ..
‘ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆಗಳ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ಈ ವಿಷಯವನ್ನು ಬೆಳಕಿಗೆ ತಂದಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳು’ ಎಂದೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.