ಸಾರಾಂಶ
ರಿಲಯನ್ಸ್ ಸಮೂಹದ ಜೊತೆಗೆ ವಿಲೀನವಾಗುವುದಾಗಿ ವಾಲ್ಟ್ ಡಿಸ್ನಿ ಘೋಷಣೆ ಮಾಡಿದೆ.
ನವದೆಹಲಿ: ರಿಲಯನ್ಸ್ ಜೊತೆಗೆ ವಾಲ್ಟ್ ಡಿಸ್ನಿ ಸಂಸ್ಥೆಯು ಭಾರತದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವಿಲೀನವಾಗುವುದಾಗಿ ಪ್ರಕಟಿಸಿದೆ. ಈ ಮೂಲಕ ಹೊಸ ಸಂಸ್ಥೆಯ ಒಟ್ಟಾರೆ ಮೌಲ್ಯ 70 ಸಾವಿರ ಕೋಟಿ ರು.ಗೂ ಅಧಿಕವಾಗಲಿದೆ. ಹೊಸ ಸಂಸ್ಥೆಯಲ್ಲಿ ರಿಲಯನ್ಸ್ ಮತ್ತು ಅದರ ಅಂಗ ಸಂಸ್ಥೆಗಳು ಶೇ.63.16ರಷ್ಟು ಷೇರು ಹೊಂದಿದ್ದರೆ ಡಿಸ್ನಿ ಸಂಸ್ಥೆ ಶೇ.36.84ರಷ್ಟು ಷೇರುಗಳನ್ನು ಹೊಂದಿರಲಿದೆ. ನೀತಾ ಅಂಬಾನಿ ಅವರು ಹೊಸ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಉದಯ್ ಶಂಕರ್ ಅವರು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಿಲಯನ್ಸ್ ಒಟಿಟಿ ಕ್ಷೇತ್ರದಲ್ಲಿ 11.5 ಸಾವಿರ ಕೋಟಿ ರು. ಹೂಡಿಕೆ ಮಾಡಲು ಒಪ್ಪಿದೆ.
ಸದ್ಯ ರಿಲಯನ್ಸ್ ಸ್ಪೋರ್ಟ್ಸ್ 18 ಸೇರಿ ಹಲವು ಚಾನೆಲ್ ಹೊಂದಿದೆ. ಡಿಸ್ನಿಯಲ್ಲಿ ಸ್ಟಾರ್ ಕ್ರಿಕೆಟ್, ಸ್ಟಾರ್ ಸ್ಪೋರ್ಟ್ಸ್, ಕಲರ್ಸ್ ಸೇರಿ ಅನೇಕ ಚಾನೆಲ್ ಇವೆ. ಇವೆಲ್ಲ ಇನ್ನು ಒಂದೇ ಸಮೂಹದಲ್ಲಿ ಕೆಲಸ ಮಾಡಲಿವೆ.