ಸಾರಾಂಶ
ಚೆನ್ನೈ: ದ್ರಾವಿಡ ಪಕ್ಷಗಳ ಹೋರಾಟದ ಭೂಮಿಯಾದ ತಮಿಳುನಾಡಿನಲ್ಲಿ ಈ ಬಾರಿ ಬದಲಾವಣೆಯ ದೊಡ್ಡ ಗಾಳಿ ಬೀಸಬಹುದು ಎನ್ನಲಾಗುತ್ತಿದೆ.
ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಕದನದಕ್ಕೆ ಸದಾ ವೇದಿಕೆಯಾಗುವ ರಾಜ್ಯದಲ್ಲಿ ಈ ಬಾರಿ ಬಿಜೆಪಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವ ಭರವಸೆ ವ್ಯಕ್ತಪಡಿಸಿದೆ.
ಹೀಗಾಗಿ ರಾಜ್ಯದ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ.ಆಡಳಿತಾರೂಢ ಡಿಎಂಕೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ್ದ ಮಹಿಳೆಯರಿಗೆ ಮಾಸಿಕ 1000 ರು. ಆರ್ಥಿಕ ನೆರವು ಸೇರಿದಂತೆ ಹಲವು ಜನಪ್ರಿಯ ಯೋಜನೆ ಜಾರಿ ಮಾಡಿದೆ.
ಜೊತೆಗೆ ಇಂಡಿಯಾ ಮೈತ್ರಿಕೂಟದ ಅಂಗಪಕ್ಷವಾದ ಕಾಂಗ್ರೆಸ್ ಜೊತೆ ಯಾವುದೇ ಗೊಂದಲಕ್ಕೆ ಗುರಿ ಮಾಡದೇ ಸಿಎಂ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಚುನಾವಣೆಯಲ್ಲಿ ಇತರೆ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿದೆ.
ಇನ್ನೊಂದೆಡೆ ಪ್ರಮುಖ ವಿಪಕ್ಷ ಎಐಎಡಿಎಂಕೆ ಪನ್ನೀರ್‌ಸೆಲ್ವಂ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಬಣ ಜಗಳದಲ್ಲಿ ಸಿಕ್ಕಿಬಿದ್ದಿದೆ. ಇದು ಪಕ್ಷದ ಗೆಲುವಿನ ಹಾದಿಗೆ ದೊಡ್ಡ ಪೆಟ್ಟು ನೀಡಿದೆ.
ಅಲ್ಲದೆ ಬಿಜೆಪಿ ಕೂಡಾ ಪ್ರತ್ಯೇಕವಾಗಿ ಸ್ಪರ್ಧಿಸಲು ಮುಂದಾಗಿರುವುದು ಮಾಜಿ ಸಿಎಂ ದಿ.ಜಯಲಲಿತಾರ ಪಕ್ಷಕ್ಕೆ ಆಗಿರುವ ಹಿನ್ನಡೆ.ಈ ನಡುವೆ ಯುವ ನಾಯಕ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿ ಈ ಬಾರಿ ರಾಜ್ಯದಲ್ಲಿ ಬದಲಾವಣೆಯ ಹೊಸ ಗಾಳಿ ಬೀಸುವ ಭರವಸೆ ವ್ಯಕ್ತಪಡಿಸಿದೆ.
ಬಿಜೆಪಿಯ ಬಲ ಹೆಚ್ಚುವ ಚುಣಾವಣೋತ್ತರ ಸಮೀಕ್ಷಾ ವರದಿಗಳು, ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆಗೆ ಕಾರಣವಾಗಿದೆ.
ಎಐಎಡಿಎಂಕೆ ಸಾಮರ್ಥ್ಯ: ಮಾಜಿ ಸಿಎಂ ಪಳನಿಸ್ವಾಮಿ ಪ್ರಬಲ ನಾಯಕತ್ವ. ಡಿಎಂಕೆ, ಬಿಜೆಪಿ ನಾಯಕರ ಟೀಕಿಸುವ ಒಂದು ಅವಕಾಶವನ್ನೂ ಬಿಡುತ್ತಿಲ್ಲ.ಸಿಎಎ ವಿಷಯದಲ್ಲಿ ಪಳನಿಸ್ವಾಮಿ ನಿಲುವು ಪಕ್ಷಕ್ಕೆ ಜಾತ್ಯತೀತ ಇಮೇಜ್ ನೀಡುವ ಸಾಧ್ಯತೆ ಇದೆ.ಕಾವೇರಿ ಸೇರಿದಂತೆ ರಾಜ್ಯದ ಹಿತಾಸಕ್ತಿ ವಿಷಯದಲ್ಲಿ ಸರ್ಕಾರದ ವಿರುದ್ಧದ ಟೀಕಾಪ್ರಹಾರ ನೆರವಾಗಬಹುದು.
ದೌರ್ಬಲ್ಯ: ಪಕ್ಷದ ಕೆಲ ನಾಯಕರ ಬಾಯಿಗೆ ಬಂದಂತೆ ನೀಡುವ ಹೇಳಿಕೆಗಳು ಪಕ್ಷಕ್ಕೆ ಹಲವು ಬಾರಿ ಮುಜುಗರ ತಂದಿದೆ.ಪಳನಿಸ್ವಾಮಿ ಬಿಟ್ಟರೆ ಪಕ್ಷದಲ್ಲಿ ಇನ್ಯಾರೂ ಸ್ಟಾರ್ ಪ್ರಚಾರಕರು ಇಲ್ಲ.ಕೇಂದ್ರದ ಮಟ್ಟದಲ್ಲಿ ಪ್ರಭಾವ ಬೀರಬಲ್ಲ ನಾಯಕ ಎಂಬ ಇಮೇಲ್ ಬೆಳೆಸಿಕೊಳ್ಳುವಲ್ಲಿ ಪಳನಿಸ್ವಾಮಿ ವಿಫಲ
ಬಿಜೆಪಿ ಸಾಮರ್ಥ್ಯ: ಅಣ್ಣಾಮಲೈ ರಾಜ್ಯಾಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ಬಿಜೆಪಿ ಪರ ಹೊಸ ಅಲೆ ಎದ್ದಿದೆ, ವಿಶ್ವಾಸ ಹೆಚ್ಚಿದೆ.ಅಣ್ಣಾಮಲೆ ನಡೆಸಿದ ಪಾದಯಾತ್ರೆ, ಯುವ ನಾಯಕನ ಬಗ್ಗೆ ಮೋದಿ ವಿಶ್ವಾಸ ಜನರಲ್ಲಿ ಆಶಾಭಾವನೆ ಮೂಡಿಸಿದೆ.ದೇಶವ್ಯಾಪಿ ಮೋದಿ ಹಬ್ಬಿರುವ ಪ್ರಧಾನಿ ಮೋದಿ ಅಲೆ ರಾಜ್ಯದಲ್ಲೂ ಪರಿಣಾಮ ಬೀರಿದರೆ ಪಕ್ಷಕ್ಕೆ ಲಾಭ
ದೌರ್ಬಲ್ಯ: ಡಿಎಂಕೆ, ಎಐಎಡಿಎಂಕೆಗೆ ಹೋಲಿಸಿದರೆ ದೊಡ್ಡ ಮಟ್ಟದಲ್ಲಿ ತಳಮಟ್ಟದ ಕಾರ್ಯಕರ್ತರ ಪಡೆ ಇಲ್ಲಅಣ್ಣಾಮಲೈ ಹೊರತುಪಡಿಸಿದರೆ ರಾಜ್ಯದಲ್ಲಿ ಹೇಳಿಕೊಳ್ಳುವಂಥ ಯಾವುದೇ ಬಿಜೆಪಿ ನಾಯಕರು ಇಲ್ಲ