ಫೆ.12ರಂದು ರಾಷ್ಟ್ರಪತಿ ಭವನದಲ್ಲಿ ಸಿಆರ್‌ಪಿಎಫ್‌ ಮಹಿಳಾ ಅಧಿಕಾರಿ ಪೂನಂ ಗುಪ್ತಾ ಅವನೀಶ್‌ ಕುಮಾರ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನವದೆಹಲಿ: ಫೆ.12ರಂದು ರಾಷ್ಟ್ರಪತಿ ಭವನದಲ್ಲಿ ಸಿಆರ್‌ಪಿಎಫ್‌ ಮಹಿಳಾ ಅಧಿಕಾರಿ ಪೂನಂ ಗುಪ್ತಾ ಅವನೀಶ್‌ ಕುಮಾರ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳಾ ತುಕಡಿ ಮುನ್ನಡೆಸಿದ್ದ ವೃತ್ತಿಪರ ಶ್ರೇಷ್ಠತೆ, ಸಮರ್ಪಣೆ ಮತ್ತು ಬದ್ಧತೆಯನ್ನು ಗುರುತಿಸಿ ರಾಷ್ಟ್ರಪತಿಯವರು ಮದುವೆಗೆ ಅನುಮತಿ ನೀಡಿದ್ದರು.

 ಈ ನಡುವೆ ಇದು ರಾಷ್ಟ್ರಪತಿ ಭವನದಲ್ಲಿ ನಡೆದ ಮೊದಲ ಮದುವೆ ಅಂತಲೇ ಬಿಂಬಿತವಾಗಿತ್ತು. ಆದರೆ ಈ ಬಗ್ಗೆ ಪಿಐಬಿ ಫ್ಯಾಕ್ಟ್‌ಚೆಕ್ ನಡೆಸಿದ್ದು, ಇದು ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಮೊದಲ ಮದುವೆಯಲ್ಲ. ರಾಷ್ಟ್ರಪತಿ ಭವನ ಎಸ್ಟೇಟ್‌ ಈ ಮೊದಲು ಹಲವು ಮದುವೆಗಳಿಗೆ ಸಾಕ್ಷಿಯಾಗಿತ್ತು ಎಂದಿದೆ.