ಸಾರಾಂಶ
ಪಾಕಿಸ್ತಾನದ ಮೇಲೆ ಭಾರತ ಇತ್ತೀಚೆಗೆ ನಡೆಸಿದ ದಾಳಿಗೆ ‘ಆಪರೇಷನ್ ಸಿಂದೂರ’ ಎಂದು ಹೆಸರಿಟ್ಟಿದ್ದಕ್ಕೆ ಎಸ್ಪಿ ಸಂಸದೆ, ನಟಿ ಜಯಾ ಬಚ್ಚನ್ ಆಕ್ಷೇಪಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ನವದೆಹಲಿ: ಪಾಕಿಸ್ತಾನದ ಮೇಲೆ ಭಾರತ ಇತ್ತೀಚೆಗೆ ನಡೆಸಿದ ದಾಳಿಗೆ ‘ಆಪರೇಷನ್ ಸಿಂದೂರ’ ಎಂದು ಹೆಸರಿಟ್ಟಿದ್ದಕ್ಕೆ ಎಸ್ಪಿ ಸಂಸದೆ, ನಟಿ ಜಯಾ ಬಚ್ಚನ್ ಆಕ್ಷೇಪಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ಪಹಲ್ಗಾಂ ಉಗ್ರ ದಾಳಿಯು ಹಲವಾರು ಮಹಿಳೆಯರ ಸಿಂದೂರವನ್ನು ನಾಶಪಡಿಸಿದೆ. ಹೀಗಿದ್ದಾಗ ಕಾರ್ಯಾಚರಣೆಗೆ ಸಿಂದೂರ ಎಂದು ಹೆಸರಿಡುವ ಅಗತ್ಯವೇನಿತ್ತು? ನೀವು ನೇಮಿಸಿಕೊಂಡಿರುವ ಬರಹಗಾರರಿಗೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ’ ಎಂದರು. ಆಗ ಸದನದಲ್ಲಿ ಕೋಲಾಹಲ ಉಂಟಾಯಿತು. ಜಯಾ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು.