ಗುಜರಾತ್‌ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ಗೆ ಬನಸ್ಕಾಂಠಾ ಜಿಲ್ಲೆಯ ಪಾಲನ್‌ಪುರ ಸೆಷನ್ಸ್ ಕೋರ್ಟ್ ಡ್ರಗ್ಸ್‌ ಪ್ರಕರಣವೊಂದರಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಪಾಲನ್‌ಪುರ: ಗುಜರಾತ್‌ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ಗೆ ಬನಸ್ಕಾಂಠಾ ಜಿಲ್ಲೆಯ ಪಾಲನ್‌ಪುರ ಸೆಷನ್ಸ್ ಕೋರ್ಟ್ ಡ್ರಗ್ಸ್‌ ಪ್ರಕರಣವೊಂದರಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕಸ್ಟಡಿ ಸಾವಿನ ಪ್ರಕರಣದಲ್ಲಿ ಈಗಾಗಲೇ ಸಂಜೀವ್ ಭಟ್ ಜೈಲಲ್ಲಿದ್ದಾರೆ. ಇದರ ನಡುವೆ, 1996 ರಲ್ಲಿ ವಕೀಲರು ಇದ್ದ ಪಾಲನ್‌ಪುರದ ಹೋಟೆಲ್ ಕೊಠಡಿಯಿಂದ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದಲ್ಲಿ ಭಟ್‌ ಆರೋಪಿ ಆಗಿದ್ದರು. 

ಏಕೆಂದರೆ ವಕೀಲರನ್ನು ಸಿಲುಕಿಸಲು ಭಟ್‌ ಅವರೇ ಆ ಕೋಣೆಯಲ್ಲಿ ಡ್ರಗ್ಸ್‌ ಇರಿಸಿದ್ದರು ಎಂದು ದೂರಲಾಗಿತ್ತು. ಈ ಕೇಸಲ್ಲಿ ರಾಜಸ್ಥಾನದ ವಕೀಲರನ್ನು ಸುಳ್ಳು ಆರೋಪದ ಮೇಲೆ ದೋಷಿ ಎಂದು ಪರಿಗಣಿಸಲಾಗಿತ್ತು.

ಹೀಗಾಗಿ ಈ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಡ್ರಗ್ಸ್, ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆ, ಭಾರತೀಯ ದಂಡ ಸಂಹಿತೆ ಸೆಕ್ಷನ್‌ ಅಡಿ ಸಂಜೀವ್ ಭಟ್‌ಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.