ಸಾರಾಂಶ
ಪಟನಾ: ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದ ವೇಳೆ ನಡೆದಿದೆ ಎನ್ನಲಾಗಿರುವ ‘ನೌಕರಿಗಾಗಿ ಭೂಮಿ’ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಲಾಲು ಆಪ್ತ ಅಮಿತ್ ಕಟ್ಯಾಲ್‌ರನ್ನು ಬಂಧಿಸಿದೆ.
ಪಟನಾ: ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದ ವೇಳೆ ನಡೆದಿದೆ ಎನ್ನಲಾಗಿರುವ ‘ನೌಕರಿಗಾಗಿ ಭೂಮಿ’ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಲಾಲು ಆಪ್ತ ಅಮಿತ್ ಕಟ್ಯಾಲ್‌ರನ್ನು ಬಂಧಿಸಿದೆ.
ಅಮಿತ್ ಕಟ್ಯಾಲ್ ಎಕೆ ಇನ್ಫೋಟೆಕ್ ಎಂಬ ಖಾಸಗಿ ಕಂಪನಿ ಮಾಲೀಕರಾಗಿದ್ದು, ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಇ.ಡಿ ಆರೋಪಿಸಿದೆ. ಇದಕ್ಕಾಗಿ ವಿಚಾರಣೆಗೆ ಹಾಜರಾಗುವಂತೆ ಎರಡು ತಿಂಗಳಿನಿಂದ ಹಲವು ಬಾರಿ ನೋಟಿಸ್ ನೀಡಿದ್ದರು, ಅಮಿತ್ ಗೈರು ಹಾಜರಾಗಿದ್ದರು. ಈ ಕಾರಣವಾಗಿ ಅವರನ್ನು ಇ.ಡಿ. ಬಂಧಿಸಿದೆ.ಅಮಿತ್ ಅವರು ಲಾಲು ಹಾಗೂ ಪುತ್ರ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ರಿಗೆ ಆಪ್ತರಾಗಿದ್ದು, ಅಕ್ರಮ ಹಣ ವರ್ಗದಲ್ಲಿ ಇವರನ್ನು ಬಳಸಿಕೊಳ್ಳಲಾಗಿದೆ ಎಂದು ಇ.ಡಿ. ಆರೋಪಿಸಿದೆ.