ಸಾರಾಂಶ
ನನ್ನ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.)ದ ದಾಳಿಗೆ ಸಿದ್ಧತೆ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿ : ನನ್ನ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.)ದ ದಾಳಿಗೆ ಸಿದ್ಧತೆ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
‘ಸಂಸತ್ತಿನಲ್ಲಿ ನಾನು ನೀಡಿದ ಚಕ್ರವ್ಯೂಹ ಹೇಳಿಕೆಯ ನಂತರ ಇ.ಡಿ. ದಾಳಿಯ ಸಿದ್ಧತೆ ಆರಂಭವಾಗಿದೆ. ಇ.ಡಿ. ನಿರ್ದೇಶಕರೇ, ನಾನು ತೆರೆದ ಬಾಹುಗಳೊಂದಿಗೆ ಕಾಯುತ್ತಿದ್ದೇನೆ. ಟೀ ಮತ್ತು ಬಿಸ್ಕತ್ ನನ್ನ ಲೆಕ್ಕದಲ್ಲಿ’ ಎಂದು ರಾಹುಲ್ ‘ಎಕ್ಸ್’ ಮಾಡಿದ್ದಾರೆ.
‘ಖಂಡಿತ ಇಬ್ಬರಲ್ಲಿ ಒಬ್ಬರಿಗೆ ನನ್ನ ಚಕ್ರವ್ಯೂಹ ಭಾಷಣ ಇಷ್ಟವಾಗಿರುವುದಿಲ್ಲ. ಇ.ಡಿ. ಒಳಗಿನವರೇ ನನ್ನ ವಿರುದ್ಧ ದಾಳಿಯ ಸಿದ್ಧತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ’ ಎಂದೂ ತಿಳಿಸಿದ್ದಾರೆ.
ಸೋಮವಾರ ಲೋಕಸಭೆಯಲ್ಲಿ ಮಾತನಾಡುವಾಗ ರಾಹುಲ್ ಗಾಂಧಿ, ‘ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆರು ಜನರು ಇಡೀ ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ’ ಎಂದು ಆರೋಪಿಸಿದ್ದರು.