ಸಾರಾಂಶ
ಭೂಹಗರಣದ ಅಕ್ರಮ ಹಣ ವರ್ಗಾವಣೆ ಕೇಸಿನ ವಿಚಾರಣೆಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್‌ರ ದೆಹಲಿಯ ಮನೆಗೆ ಬಂದ ಇ.ಡಿ. ಸಿಬ್ಬಂದಿ, ರಾತ್ರಿವರೆಗೆ ಶೋಧ ನಡೆಸಿ ಅವರ ಬಿಎಂಡಬ್ಲ್ಯು ಕಾರು ಜಪ್ತಿ ಮಾಡಿದ್ದಾರೆ.
ನವದೆಹಲಿ: ಭೂಹಗರಣದ ಅಕ್ರಮ ಹಣ ವರ್ಗಾವಣೆ ಕೇಸಿನ ವಿಚಾರಣೆಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್‌ರ ದೆಹಲಿಯ ಮನೆಗೆ ಬಂದ ಇ.ಡಿ. ಸಿಬ್ಬಂದಿ, ರಾತ್ರಿವರೆಗೆ ಶೋಧ ನಡೆಸಿ ಅವರ ಬಿಎಂಡಬ್ಲ್ಯು ಕಾರು ಜಪ್ತಿ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯದ (ಇ.ಡಿ.) ತಂಡ ಜ.29 ಅಥವಾ 31ರಂದು ದಿಲ್ಲಿ ನಿವಾಸಕ್ಕೆ ಬರುವುದಾಗಿ ಸೊರೇನ್‌ಗೆ . ಹೇಳಿತ್ತು. ಆ ಪ್ರಕಾರ ಸೋಮವಾರ ಸೊರೇನ್ ವಿಚಾರಣೆಗೆಂದು ಅವರ ದಿಲ್ಲಿ ಮನೆಗೆ ಬಂದಿತ್ತು. ಆದರೆ ಅಷ್ಟರಲ್ಲಿ ಸೊರೇನ್ ಮನೆಯಿಂದ ತೆರಳಿದ್ದ ಕಾರಣ ಸಿಎಂ ಭೇಟಿ ಸಾಧ್ಯವಾಗಿಲ್ಲ.ಈ ನಡುವೆ, ಜ.31 ರಂದು ವಿಚಾರಣೆಗೆ ಅಧಿಕಾರಿಗಳ ಮುಂದೆ ಹಾಜರಾಗುವುದಾಗಿ ಹೇಮಂತ್ ಅವರ ಕಚೇರಿ ಇ.ಡಿ.ಗೆ ಮಾಹಿತಿ ನೀಡಿದೆ ಎನ್ನಲಾಗಿದೆ.ವಿಚಾರಣೆಗೆ ಬರುವಂತೆ ಇ.ಡಿ. ನೀಡಿದ 9 ನೋಟಿಸ್‌ಗೂ ಹೇಮಂತ್ ಸೊಪ್ಪು ಹಾಕಿಲ್ಲ. ಇತ್ತೀಚೆಗೆ ಅಧಿಕಾರಿಗಳ ತಂಡ ರಾಂಚಿಯ ಹೇಮಂತ್ ನಿವಾಸಕ್ಕೆ ತೆರಳಿ ಕೆಲ ದಾಖಲೆಗಳನ್ನು ಪರಿಶೀಲಿಸಿ ಮರಳಿ ಬಂದಿತ್ತು. ಅದರ ಬೆನ್ನಲ್ಲೇ ಈ ಭೇಟಿ ನಡೆದಿದೆ.