ಸಾರಾಂಶ
‘ಆರ್‌ಬಿಐ ವರದಿಯಂತೆ ಕಳೆದ 3-4 ವರ್ಷಗಳಲ್ಲಿ ದೇಶದಲ್ಲಿ 8 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮುಂಬೈ: ‘ಆರ್‌ಬಿಐ ವರದಿಯಂತೆ ಕಳೆದ 3-4 ವರ್ಷಗಳಲ್ಲಿ ದೇಶದಲ್ಲಿ 8 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮುಂಬೈನ ಗೋರೆಗಾಂವ್ ಉಪನಗರದಲ್ಲಿ 29 ಸಾವಿರ ಕೋಟಿ ರು ವೆಚ್ಚದ ರಸ್ತೆ, ರೈಲ್ವೆ ಮತ್ತು ಬಂದರು ಕಾಮಗಾರಿ ಶಂಕುಸ್ಥಾಪನೆ ನೆರವೇರಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
‘ಇತ್ತೀಚಿಗೆ ಆರ್‌ಬಿಐ ಉದ್ಯೋಗದ ಕುರಿತು ವಿಸ್ಕೃತ ವರದಿಯನ್ನು ಬಿಡುಗಡೆ ಮಾಡಿದೆ. ಆ ವರದಿಯ ಪ್ರಕಾರ, ಕಳೆದ ಮೂರ್ನಾಲ್ಕು ವರ್ಷದಲ್ಲಿ 8 ಕೋಟಿ ಹೊಸ ಉದ್ಯೋಗವನ್ನು ಸೃಷ್ಟಿಸಲಾಗಿದೆ. ಈ ಅಂಕಿ ಅಂಶಗಳು ದೇಶದಲ್ಲಿ ಉದ್ಯೋಗದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದವರನ್ನು ಮೌನವಾಗಿಸಿದೆ’ ಎಂದು ಪ್ರಧಾನಿ ಮೋದಿ ವಿರೋಧಿಗಳಿಗೆ ತಿರುಗೇಟು ನೀಡಿದರು.