ಸಾರಾಂಶ
ನೋಂದಾಯಿತ ಮಾನ್ಯತೆ ರಹಿತ ಪಕ್ಷಗಳಿಗೆ ಚಿಹ್ನೆ ಹಂಚಿಕೆ ಮಾಡಲು ಅರ್ಜಿ ಸಲ್ಲಿಸಬೇಕೆಂದು ಚುನಾವಣಾ ಆಯೋಗ ತಿಳಿಸಿದೆ.
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ಬಳಿಕ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಒಲವು ತೋರಿದಂತಿದ್ದು, ನೋಂದಾಯಿತ ಮಾನ್ಯತೆ ರಹಿತ ರಾಜಕೀಯ ಪಕ್ಷಗಳಿಂದ ಚಿಹ್ನೆ ನೀಡಲು ಅರ್ಜಿ ಆಹ್ವಾನಿಸಿದೆ.
ಸುಪ್ರೀಂ ಕೋರ್ಟ್ ಸೂಚನೆಯಂತೆ ಸೆ.30ರೊಳಗೆ ಚುನಾವಣಾ ಪ್ರಕ್ರಿಯೆ ಮುಗಿಸಬೇಕಿದ್ದು, ಶೀಘ್ರದಲ್ಲೇ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಚಿಹ್ನೆ ನೀಡುವ ಉದ್ದೇಶ ಹೊಂದಿದ್ದು, ರಾಜಕೀಯ ಪಕ್ಷಗಳಿಂದ ಅರ್ಜಿ ಆಹ್ವಾನಿಸಿದೆ. ಪಕ್ಷಗಳು ಸಲ್ಲಿಸುವ ಚಿಹ್ನಯ ಬೇಡಿಕೆ ಪರಿಶೀಲಿಸಿ ಆಯೋಗ ಚಿಹ್ನೆ ಹಂಚಿಕೆ ಮಾಡಲಿದೆ.
ಲೋಕಸಭಾ ಚುನಾವಣೆಯ ಜೊತೆಗೇ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆಗೂ ಚುನಾವಣೆ ನಡೆಸಲು ಭದ್ರತಾ ಕಾರಣ ನೀಡಿ ಚುನಾವಣಾ ಆಯೋಗ ನಿರಾಕರಿಸಿತ್ತು. ಹಾಗೂ ರಾಜ್ಯದಲ್ಲಿ ದಾಖಲೆ ಮತದಾನವಾದ ಬಳಿಕ ಚುನಾವಣೆ ನಡೆಸಲು ಉತ್ಸುಕರಾಗಿರುವುದಾಗಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದರು.