ಸಾರಾಂಶ
ಚುನಾವಣಾ ಬಾಂಡ್ ಜಾಗತಿಕವಾಗಿ ಅತಿದೊಡ್ಡ ಹಗರಣವಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಮಹತ್ವವನ್ನು ಪಡೆದುಕೊಳ್ಳಲಿದೆ ಎಂಬುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಹಾಗೂ ಆರ್ಥಿಕ ತಜ್ಞರಾಗಿರುವ ಪರಕಾಲ ಪ್ರಭಾಕರ್ ಆರೋಪಿಸಿದ್ದಾರೆ.
ನವದೆಹಲಿ: ಚುನಾವಣಾ ಬಾಂಡ್ ಜಾಗತಿಕವಾಗಿ ಅತಿದೊಡ್ಡ ಹಗರಣವಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಮಹತ್ವವನ್ನು ಪಡೆದುಕೊಳ್ಳಲಿದೆ ಎಂಬುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಹಾಗೂ ಆರ್ಥಿಕ ತಜ್ಞರಾಗಿರುವ ಪರಕಾಲ ಪ್ರಭಾಕರ್ ಆರೋಪಿಸಿದ್ದಾರೆ.
ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಚುನಾವಣಾ ಬಾಂಡ್ ಮೂಲಕ ಬಿಜೆಪಿ ಪ್ರಪಂಚದ ಅತಿದೊಡ್ಡ ಹಗರಣ ಮಾಡಿರುವುದು ಬೆಳಕಿಗೆ ಬಂದಿದೆ.
ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವ ಪಡೆದುಕೊಂಡು ಬಿಜೆಪಿಗೆ ಚುನಾವಣೆಯಲ್ಲಿ ದುಷ್ಪರಿಣಾಮ ಉಂಟು ಮಾಡಲಿದೆ.
ಈ ಹಗರಣದಿಂದಾಗಿ ಪ್ರಸ್ತುತ ಲೋಕಸಭಾ ಚುನಾವಣೆಯು ಎರಡು ಮೈತ್ರಿಕೂಟಗಳ ಸೆಣಸಾಟದ ಬದಲು ಬಿಜೆಪಿ ಮತ್ತು ಭಾರತೀಯರ ನಡುವಿನ ಹೋರಾಟವಾಗಿ ಬದಲಾಗಿದೆ’ ಎಂದು ಕಿಡಿಕಾರಿದ್ದಾರೆ.
ಈ ಹೇಳಿಕೆಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪರಕಾಲ ಅವರು ನಿರ್ಮಲಾ ಪತಿ ಆಗಿದ್ದರೂ ಒಟ್ಟಿಗೇ ವಾಸಿಸುತ್ತಿಲ್ಲ ಎನ್ನಲಾಗಿದೆ.