ಸಾರಾಂಶ
ಕೆಲ ದಿನಗಳ ಹಿಂದಿನವರೆಗೂ ಬಿಜೆಪಿ 180 ಸ್ಥಾನ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿದ್ದೆ.
ಗಾಜಿಯಾಬಾದ್: ಕೆಲ ದಿನಗಳ ಹಿಂದಿನವರೆಗೂ ಬಿಜೆಪಿ 180 ಸ್ಥಾನ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿದ್ದೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಬಿಜೆಪಿ 150 ಸ್ಥಾನ ಗೆಲ್ಲೋದು ಅನುಮಾನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ.
ಇಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ‘ಎಲ್ಲಾ ರಾಜ್ಯಗಳಿಂದ ನಮಗೆ ಪೂರಕವಾದ ಮಾಹಿತಿ ಬರುತ್ತಿದೆ. ಚುನಾವಣೆಯಲ್ಲಿ ನಮ್ಮ ಪರವಾದ ಒಳ ಅಲೆ ಇದೆ. ಇದು ಬಿಜೆಪಿಯ ಗೆಲುವನ್ನು 150ಕ್ಕಿಂತಲೂ ಕಡಿಮೆ ಸ್ಥಾನಗಳಿಗೆ ಸೀಮಿತ ಮಾಡಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲಿದೆ’ ಎಂದು ಹೇಳಿದರು.
ಇದೆ ವೇಳೆ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಹೆಸರಿನಲ್ಲಿ ವಿಶ್ವದ ಅತಿದೊಡ್ಡ ಸುಲಿಗೆ ಮಾಡಿದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಚಾಂಪಿಯನ್ ಎಂದು ಆರೋಪಿಸಿದರು.