ಆನೆಕಾಲು ರೋಗ ಬರದಂತೆ ಎಚ್ಚರಿಕೆ ವಹಿಸಿ

| Published : Nov 23 2023, 01:45 AM IST

ಸಾರಾಂಶ

ದಾಬಸ್‌ಪೇಟೆ: ಆನೆಕಾಲು ರೋಗ ಕ್ಯುಲೆಕ್ಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವೆಂದು ನರಸೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕಿ ಅಶ್ವಿನಿ ತಿಳಿಸಿದರು. ಮಾಕೇನಹಳ್ಳಿ ಗ್ರಾಮದ ಕ್ರಷರ್‌ನಲ್ಲಿ ವಲಸೆ ಕಾರ್ಮಿಕರಿಗೆ ಆಯೋಜಿಸಿದ್ದ ಆನೆಕಾಲು ರೋಗದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೋಗ ಲಕ್ಷಣಗಳು ಸೋಂಕಿತ ಸೊಳ್ಳೆ ಕಚ್ಚಿದ ವಾರದಲ್ಲಿ ಜ್ವರ, ಮೈ-ಕೈ ನೋವು, ದುಗ್ದಗ್ರಂಥಿಗಳಲ್ಲಿ ನೋವುಂಟಾಗುತ್ತದೆ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯದಿದ್ದರೆ 8-10 ವರ್ಷದಲ್ಲಿ ಕಾಲು ಆನೆ ಕಾಲಿನ ಮಾದರಿ ಊತ ಬಂದು ವಾಸಿಯಾಗುವುದಿಲ್ಲ. ಸೋಂಕು ಪಡೆದ ಆರಂಭದಲ್ಲೇ ಚಿಕಿತ್ಸೆ ಪಡೆದರೆ ಗುಣಪಡಿಸುವುದು ಎಂದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ , ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.