ಸಾರಾಂಶ
ಮುಂಬರುವ ಕೆನಡಾ ಸಂಸತ್ ಚುನಾವಣೆಯಲ್ಲಿ, ಹಾಲಿ ಪ್ರಧಾನಿ ಜಸ್ಟಿನ್ ಟ್ರುಡೋ ಸೋಲು ಖಚಿತ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನ ಮುಖ್ಯಸ್ಥ, ಉದ್ಯಮಿ ಎಲಾನ್ ಮಸ್ಕ್ ಭವಿಷ್ಯ ನುಡಿದಿದ್ದಾರೆ.
ನವದೆಹಲಿ: ಮುಂಬರುವ ಕೆನಡಾ ಸಂಸತ್ ಚುನಾವಣೆಯಲ್ಲಿ, ಹಾಲಿ ಪ್ರಧಾನಿ ಜಸ್ಟಿನ್ ಟ್ರುಡೋ ಸೋಲು ಖಚಿತ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನ ಮುಖ್ಯಸ್ಥ, ಉದ್ಯಮಿ ಎಲಾನ್ ಮಸ್ಕ್ ಭವಿಷ್ಯ ನುಡಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಯಿಂದ ಟ್ರುಡೋರನ್ನು ತೊಡೆದುಹಾಕಲು ಸಹಾಯ ಮಾಡುವಂತೆ ಎಕ್ಸ್‌ನಲ್ಲಿ ಬಳಕೆದಾರರೊಬ್ಬರು ಮಾಡಿದ ಮನವಿಗೆ ಮಸ್ಕ್ ಹೀಗೆ ಉತ್ತರಿಸಿದ್ದಾರೆ.
ಎಕ್ಸ್‌ನಲ್ಲಿ ಮಾತುಕತೆಯ ವೇಳೆ ಸಮಾಜವಾದಿ ಪಕ್ಷ ಕುಸಿದಿದೆ ಎಂದು ಹೇಳಿದ ಬಳಕೆದಾರರು, ಕೆನಡಾದಲ್ಲಿ ಟ್ರುಡೋ ಪದಚ್ಯುತಿಗೆ ಸಹಕರಿಸುವಂತೆ ಮಸ್ಕ್‌ರನ್ನು ಕೋರಿದ್ದರು. ಈ ಹಿಂದೆಯೂ ಜಾಲತಾಣ ನಿಯಂತ್ರಣಕ್ಕೆ ಮುಂದಾದ ಟ್ರುಡೋ ಸರ್ಕಾರವನ್ನು ಮಸ್ಕ್ ಟೀಕಿಸಿದ್ದರು. ಭಾರತ ವಿರೋಧಿ ನಿಲುವುಗಳಿಂದ ಇತ್ತೀಚೆಗೆ ಟ್ರುಡೋ ಸುದ್ದಿಯಲ್ಲಿದ್ದಾರೆ.
ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿಗರಿರುವುದು ನಿಜ: ಟ್ರುಡೋ
ಒಟ್ವಾವಾ: ಖಲಿಸ್ತಾನಿ ಸಂಘಟನೆ ವಿಚಾರವಾಗಿ ಭಾರತದೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿಕೊಂಡಿರುವ ಕೆನಡಾ ಪ್ರಧಾನಿ ಟ್ರುಡೋ ಮೊದಲ ಸಲ ಖಲಿಸ್ತಾನಿ ವಿಚಾರದಲ್ಲಿ ಸತ್ಯ ಒಪ್ಪಿಕೊಂಡಿದ್ದು, ತಮ್ಮ ದೇಶದಲ್ಲಿ ಖಲಿಸ್ತಾನಿ ಬೆಂಗಲಿಗರು ಇರುವುದು ನಿಜ’ ಎಂದಿದ್ದಾರೆ.ಪಾರ್ಲಿಮೆಂಟ್ ಹಿಲ್‌ನಲ್ಲಿ ದೀಪಾವಳಿ ಸಂಭ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅನಿವಾಸಿ ಭಾರತೀಯರನ್ನುದ್ದೇಶಿಸಿ
ಮಾತನಾಡಿದ ಟ್ರುಡೋ, ‘ಕೆನಡಾದಲ್ಲಿಯೂ ಖಲಿಸ್ತಾನಿ ಬೆಂಬಲಿಗರಿದ್ದಾರೆ. ಆದರೆ ಅವರೆಲ್ಲರೂ ಒಟ್ಟಾರೆಯಾಗಿ ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ’ ಎಂದಿದ್ದಾರೆ. ಇದೇ ವೇಳೆ ಮೋದಿ ಬಗ್ಗೆಯೂ ಟ್ರುಡೋ ಮಾತನಾಡಿದ್ದು, ‘ಕೆನಡಾದಲ್ಲಿಯೂ ಭಾರತದಲ್ಲಿನ ಮೋದಿ ಸರ್ಕಾರವನ್ನು ಬೆಂಬಲಿಸುವರಿದ್ದಾರೆ. ಆದರೆ ಅವರು ಎಲ್ಲ ಹಿಂದೂ ಕೆನಡಿಯನ್ನರನ್ನು ಪ್ರತಿನಿಧಿಸುವುದಿಲ್ಲ’ ಎಂದರು.