14ನೇ ಮಗುವನ್ನು ಸ್ವಾಗತಿಸಿದ ಸಂತಾನದಿಂದ ಸುದ್ದಿಯಾಗುತ್ತಿರುವ ವಿಶ್ವದ ನಂ.1 ಉದ್ಯಮಿ ಎಲಾನ್‌ ಮಸ್ಕ್‌

| N/A | Published : Mar 02 2025, 01:15 AM IST / Updated: Mar 02 2025, 06:42 AM IST

ಸಾರಾಂಶ

ತಮ್ಮ ಸಂಪತ್ತು ಹಾಗೂ ಸಂತಾನದಿಂದ ಸುದ್ದಿಯಾಗುತ್ತಿರುವ ವಿಶ್ವದ ನಂ.1 ಉದ್ಯಮಿ ಎಲಾನ್‌ ಮಸ್ಕ್‌ ಇದೀಗ ತಮ್ಮ 14ನೇ ಮಗುವನ್ನು ಬರಮಾಡಿಕೊಂಡಿದ್ದಾರೆ.

ವಾಷಿಂಗ್ಟನ್: ತಮ್ಮ ಸಂಪತ್ತು ಹಾಗೂ ಸಂತಾನದಿಂದ ಸುದ್ದಿಯಾಗುತ್ತಿರುವ ವಿಶ್ವದ ನಂ.1 ಉದ್ಯಮಿ ಎಲಾನ್‌ ಮಸ್ಕ್‌ ಇದೀಗ ತಮ್ಮ 14ನೇ ಮಗುವನ್ನು ಬರಮಾಡಿಕೊಂಡಿದ್ದಾರೆ.

ನ್ಯೂರಾಲಿಂಕ್‌ನ ಕಾರ್ಯನಿರ್ವಾಹಕಿಯಾಗಿರುವ ಮಸ್ಕ್‌ರ ಸಂಗಾತಿ ಶಿವೋನ್‌ ಜಿ಼ಲಿಸ್‌ ಎಕ್ಸ್‌ನಲ್ಲಿ ತಮ್ಮ 3ನೇ ಮಗಳಾದ ಅರ್ಕಾಡಿಯಾಳ ಮೊದಲ ವರ್ಷದ ಜನ್ಮದಿನದ ಬಗ್ಗೆ ಮಾಡಿದ ಪೋಸ್ಟ್‌ನಲ್ಲಿ ತಮ್ಮ 4ನೇ ಮಗ ಸೆಲ್ಡನ್ ಜನನದ ಬಗ್ಗೆಯೂ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ, ಮಸ್ಕ್‌ ಹೃದಯದ ಇಮೋಜಿ ಹಾಕಿದ್ದಾರೆ.

ಈಗಾಗಲೇ ಮಸ್ಕ್‌ ಅವರು ಜಿ಼ಲಿಸ್‌ ಅವರಿಂದ 3 ಮಕ್ಕಳನ್ನು ಪಡೆದಿದ್ದರು. ಇತ್ತೀಚೆಗಷ್ಟೇ ತಾವು ಮಸ್ಕ್‌ರ ಮಗುವಿಗೆ ತಾಯಿಯಾಗಿರುವುದಾಗಿ ಲೇಖಕಿ ಆ್ಯಶ್ಲೆ ಕ್ಲೇರ್‌ ಹೇಳಿದ್ದರು.

ಮಸ್ಕ್‌ಗೆ ಒಟ್ಟು 4 ಮಹಿಳೆಯರೊಂದಿಗೆ ಸಂಬಂಧವಿದೆ ಎನ್ನಲಾಗಿದ್ದು, ಮೊದಲ ಪತ್ನಿಗೆ 6, 2ನೇ ಗೆಳತಿಗೆ 3, 3ನೇ ಗೆಳತಿಗೆ 3 ಹಾಗೂ 4ನೇ ಗೆಳತಿಗೆ 1 ಸೇರಿ 13 ಮಕ್ಕಳಿದ್ದವು.