ಪರಿಸರ ಸಚಿವಾಲಯಕ್ಕೆ ಒಟ್ಟು 3,265 ಕೋಟಿ ರು.

| Published : Feb 02 2024, 01:03 AM IST / Updated: Feb 02 2024, 11:59 AM IST

ಸಾರಾಂಶ

ಕೇಂದ್ರ ಬಜೆಟ್‌ನಲ್ಲಿ ಪರಿಸರ ಸಚಿವಾಲಯಕ್ಕೆ 3,265 ಕೋಟಿ ರು. ಮೀಸಲಿಡಲಾಗಿದೆ.

2024- 25ನೇ ಹಣಕಾಸು ವರ್ಷದ ಅವಧಿಗೆ ಪರಿಸರ ಸಚಿವಾಲಯಕ್ಕೆ ಒಟ್ಟು 3,265 ಕೋಟಿ ರು.ಗಳನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ಘೋಷಿಸಿದ್ದಾರೆ. 

ಕಳೆದ ಬಜೆಟ್‌ನಲ್ಲಿ ಪರಿಸರ ಸಚಿವಾಲಯಕ್ಕೆ 3,231 ಕೋಟಿ ರು.ಗಳನ್ನು ಮೀಸಲಿಡಲಾಗಿತ್ತು. ಇನ್ನು 3,265 ಕೋಟಿ ರು. ಪೈಕಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರ, ರಾಷ್ಟ್ರೀಯ ಜೀವ ವೈವಿಧ್ಯತೆ ಪ್ರಾಧಿಕಾರ ಮತ್ತು ವಾಯು ಗುಣಮಟ್ಟ ನಿಯಂತ್ರಣ ಮಂಡಳಿಗೆ ಒಟ್ಟು 192 ಕೋಟಿ ರು.ಗಳನ್ನು ನೀಡಲಾಗಿದೆ. ಅಲ್ಲದೇ ವನ್ಯಜೀವಿಗಳ ಸಮಗ್ರ ಅಭಿವೃದ್ಧಿಗೆ 220 ಕೋಟಿ ರು. ನೀಡಲಾಗಿದೆ.