4 ವರ್ಷದಿಂದ ಖಾಲಿ ಇದ್ದ ಪ್ರಸಾರ ಭಾರತಿಗೆ ಕೊನೆಗೂ ಮುಖ್ಯಸ್ಥ

| Published : Mar 17 2024, 01:47 AM IST / Updated: Mar 17 2024, 08:03 AM IST

4 ವರ್ಷದಿಂದ ಖಾಲಿ ಇದ್ದ ಪ್ರಸಾರ ಭಾರತಿಗೆ ಕೊನೆಗೂ ಮುಖ್ಯಸ್ಥ
Share this Article
  • FB
  • TW
  • Linkdin
  • Email

ಸಾರಾಂಶ

ದೂರದರ್ಶನ ಹಾಗೂ ಆಕಾಶವಾಣಿ ಉಸ್ತುವಾರಿ ನೋಡಿಕೊಳ್ಳುವ ಪ್ರಸಾರ ಭಾರತಿ ಮುಖ್ಯಸ್ಥರಾಗಿ ನಿವೃತ್ತ ಐಎಎಸ್‌ ಅಧಿಕಾರಿ ನವನೀತ್‌ ಕುಮಾರ್‌ ಸೆಹಗಲ್‌ ನೇಮಕಗೊಂಡಿದ್ದಾರೆ.

ನವದೆಹಲಿ: ದೂರದರ್ಶನ ಹಾಗೂ ಆಕಾಶವಾಣಿ ಉಸ್ತುವಾರಿ ನೋಡಿಕೊಳ್ಳುವ ಪ್ರಸಾರ ಭಾರತಿ ಮುಖ್ಯಸ್ಥರಾಗಿ ನಿವೃತ್ತ ಐಎಎಸ್‌ ಅಧಿಕಾರಿ ನವನೀತ್‌ ಕುಮಾರ್‌ ಸೆಹಗಲ್‌ ನೇಮಕಗೊಂಡಿದ್ದಾರೆ. 

ಇದರೊಂದಿಗೆ 4 ವರ್ಷ ಬಳಿಕ ಈ ಹುದ್ದೆ ಭರ್ತಿ ಆದಂತಾಗಿದೆ.ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ ಎ. ಸೂರ್ಯಪ್ರಕಾಶ್‌ ಅವರ ಸೇವಾವಧಿ ಫೆಭ್ರವರಿ 2020ಕ್ಕೆ ಪೂರ್ಣಗೊಂಡು ನಿವೃತ್ತಿ ಹೊಂದಿದ್ದರು. 

ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವನೀತ್‌ ಸಸೆಹಗಲ್‌ ಅವರನ್ನು ನೇಮಕ ಮಾಡಿದ್ದಾರೆ. 3 ವರ್ಷಗಳ ಅವಧಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.