ಸಾರಾಂಶ
ಛತ್ತೀಸ್‌ಗಢದ ಬಹುಕೋಟಿ ಲಿಕ್ಕರ್ ಹಗರಣದ ಸಿಂಡಿಕೇಟ್‌ನಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಭುಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಪ್ರಮುಖ ಆರೋಪಿ. ಒಂದು ಸಾವಿರ ಕೋಟಿ ರು. ಮೌಲ್ಯದ ಲಿಕ್ಕರ್ ಸಿಂಡಿಕೇಟ್ ಅನ್ನು ಚೈತನ್ಯ ನಡೆಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ(ಇ.ಡಿ.)ವು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ.
ಛತ್ತೀಸ್‌ಗಢ ಮಾಜಿ ಸಿಎಂ ಬಘೇಲ್ ಪುತ್ರನ ಗ್ಯಾಂಗ್
ಕೋರ್ಟ್‌ಗೆ ಇ.ಡಿ. ಹೆಚ್ಚುವರಿ ಆರೋಪಟ್ಟಿ ಸಲ್ಲಿಕೆರಾಯ್ಪುರ: ಛತ್ತೀಸ್‌ಗಢದ ಬಹುಕೋಟಿ ಲಿಕ್ಕರ್ ಹಗರಣದ ಸಿಂಡಿಕೇಟ್‌ನಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಭುಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಪ್ರಮುಖ ಆರೋಪಿ. ಒಂದು ಸಾವಿರ ಕೋಟಿ ರು. ಮೌಲ್ಯದ ಲಿಕ್ಕರ್ ಸಿಂಡಿಕೇಟ್ ಅನ್ನು ಚೈತನ್ಯ ನಡೆಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ(ಇ.ಡಿ.)ವು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ.
ಈ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಿದ 7,039 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಉದ್ಯಮಿಯೂ ಆಗಿರುವ ಚೌತನ್ಯ ಬಘೇಲ್‌ರನ್ನು ಆರೋಪಿ ಎಂದು ಹೆಸರಿಸಿದೆ.2018-23ರ ಕಾಂಗ್ರೆಸ್ ಸರ್ಕಾರಾವಧಿಯಲ್ಲಿ ನಡೆದಿರುವ 2,100 ಕೋಟಿ ರು. ಲಿಕ್ಕರ್ ಹಗರಣ ಕುರಿತು ಇ.ಡಿ. ತನಿಖೆ ನಡೆಸುತ್ತಿದೆ. ಚೈತನ್ಯ ಬಘೇಲ್ ಅವರು ಲಿಕ್ಕರ್ ಹಗರಣದಿಂದ ಬಂದ ಹಣವನ್ನು ಬೇರೆ ಉದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ.
ಚೈತನ್ಯ ಬಘೇಲ್ ಅವರನ್ನು ಲಿಕ್ಕರ್ ಹಗರಣಕ್ಕೆ ಸಂಬಂಧಿಸಿ ಜು.18ರಂದು ಬಂಧಿಸಲಾಗಿತ್ತು. ಹಗರಣದಲ್ಲಿ ಬಂದ 16.7 ಕೋಟಿ ರುಪಾಯಿ ಅವರನ್ನು ಚೈತನ್ಯ ಅವರು ರಿಯಲ್ ಎಸ್ಟೇಟ್ ಯೋಜನೆ ಅಭಿವೃದ್ಧಿಗೆ ಬಳಸಿಕೊಂಡಿದ್ದಾರೆ ಎಂದು ಇ.ಡಿ. ಹಿಂದೆ ಆರೋಪಿಸಿತ್ತು.