ಸಾರಾಂಶ
ಮಾವೋವಾದಿ ನಕ್ಸಲ್ ಸಂಪರ್ಕ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ದೆಹಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ ಪ್ರೊ। ಜಿ.ಎನ್. ಸಾಯಿಬಾಬಾ ಗುರುವಾರ ಇಲ್ಲಿನ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದಾರೆ.
ನಾಗ್ಪುರ: ಮಾವೋವಾದಿ ನಕ್ಸಲ್ ಸಂಪರ್ಕ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ದೆಹಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ ಪ್ರೊ। ಜಿ.ಎನ್. ಸಾಯಿಬಾಬಾ ಗುರುವಾರ ಇಲ್ಲಿನ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದಾರೆ. ಅವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ ಎರಡು ದಿನಗಳ ನಂತರ ಬಂಧಮುಕ್ತರಾಗಿದ್ದಾರೆ.
ಮಾವೋವಾದಿ ನಕ್ಸಲ್ ಸಂಪರ್ಕ ಪ್ರಕರಣದಲ್ಲಿನ ಆರೋಪವನ್ನು ಸಾಬೀತು ಪಡಿಸಲು ಪ್ರಸಿಕ್ಯೂಷನ್ ವಿಫಲರಾದ ಕಾರಣ, ಕೆಳ ನ್ಯಾಯಾಲಯ ಸಾಯಿಬಾಬಾ ಅವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿತ್ತು. ಈ ನಿಟ್ಟಿನಲ್ಲಿ ದೋಷಮುಕ್ತರಾದ ಪ್ರೊ. ಸಾಯಿಬಾಬ ಅವರನ್ನು ಬಿಡುಗಡೆ ಮಾಡಲಾಗಿದೆ.