ನವೀನ್‌ ಜಿಂದಾಲ್‌ ತಾಯಿ ಸಾವಿತ್ರಿ ಜಿಂದಾಲ್‌ ಕೂಡ ಬಿಜೆಪಿಗೆ

| Published : Mar 29 2024, 12:54 AM IST / Updated: Mar 29 2024, 08:22 AM IST

ನವೀನ್‌ ಜಿಂದಾಲ್‌ ತಾಯಿ ಸಾವಿತ್ರಿ ಜಿಂದಾಲ್‌ ಕೂಡ ಬಿಜೆಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆಗೂ ಮುನ್ನ ದೇಶದ ಶ್ರೀಮಂತ ಮಹಿಳೆ, ಹರಿಯಾಣದ ಹಿಸಾರ್‌ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಒ.ಪಿ. ಜಿಂದಾಲ್‌ ಅವರ ಪತ್ನಿ ಸಾವಿತ್ರಿ ಜಿಂದಾಲ್‌ ಗುರುವಾರ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಚಂಡೀಗಢ: ಲೋಕಸಭೆ ಚುನಾವಣೆಗೂ ಮುನ್ನ ದೇಶದ ಶ್ರೀಮಂತ ಮಹಿಳೆ, ಹರಿಯಾಣದ ಹಿಸಾರ್‌ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಒ.ಪಿ. ಜಿಂದಾಲ್‌ ಅವರ ಪತ್ನಿ ಸಾವಿತ್ರಿ ಜಿಂದಾಲ್‌ ಗುರುವಾರ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಮಗ ನವೀನ್‌ ಜಿಂದಾಲ್‌ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅದರ ಬೆನ್ನಲ್ಲೇ ಹರ್ಯಾಣ ಮುಖ್ಯಮಂತ್ರಿ ನಯಬ್ ಸಿಂಗ್ ಸೈನಿ, ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಅವರು ಬಿಜೆಪಿ ಸೇರಿದರು.

ಸಾವಿತ್ರಿ ಬುಧವಾರ ರಾತ್ರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಪೋಸ್ಟ್‌ ಮಾಡಿದ್ದರು.

ಸಾವಿತ್ರಿ ಜಿಂದಾಲ್‌ ಅವರು ಇಂಡಿಯಾದ ಅತ್ಯಂತ ಶ್ರೀಮಂತ ಮಹಿಳೆಯೆಂದು ಫೋರ್ಬ್‌ ಇಂಡಿಯಾ ಸಂಸ್ಥೆ ಪ್ರಕಟಿಸಿತ್ತು.