ಸಾರಾಂಶ
ಜಾಮೀನು ವಿಸ್ತರಣೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಸ್ಥಳೀಯ ನ್ಯಾಯಾಲಯ ಜೂ.5ಕ್ಕೆ ಕಾಯ್ದಿರಿಸಿದೆ.
ನವದೆಹಲಿ: ಜಾಮೀನು ವಿಸ್ತರಣೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಸ್ಥಳೀಯ ನ್ಯಾಯಾಲಯ ಜೂ.5ಕ್ಕೆ ಕಾಯ್ದಿರಿಸಿದೆ. ಹಾಗಾಗಿ ಜೂ.1ಕ್ಕೆ ಜಾಮೀನು ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಭಾನುವಾರ ತಿಹಾರ್ ಜೈಲಿಗೆ ಮರಳಲಿದ್ದಾರೆ.
ತಮಗೆ ಕಿಡ್ನಿ ವೈಫಲ್ಯ ಮತ್ತು ಕ್ಯಾನ್ಸರ್ ಕುರಿತ ತಪಾಸಣೆಗಾಗಿ ಜಾಮೀನು ಅವಧಿ ವಿಸ್ತರಿಸಬೇಕು ಎಂದು ಕೇಜ್ರಿ ಕೋರಿದ್ದರು. ಆದರೆ ಕೇಜ್ರಿವಾಲ್ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಹೀಗಾಗಿ ಅವರ ಜಾಮೀನು ವಿಸ್ತರಿಸಬಾರದು ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯದಲ್ಲಿ ತನ್ನ ವಾದ ಮಂಡಿಸಿದೆ.