ಸಾರಾಂಶ
ಕೆನಡಾಗೆ ಹೊರಟ ವಿಮಾನಕ್ಕೆ ಹುಸಿ ಬಾಂಬ್ ಕರೆ ಬಂದಿದ್ದು, ಇದು ವಾರದಲ್ಲಿ ಹುಸಿ ಬಾಂಬ್ ಕರೆ ಬಂದ 5ನೇ ಘಟನೆಯಾಗಿದೆ.
ನವದೆಹಲಿ: ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿದ್ದು, ಬುಧವಾರವೂ ಸಹ ಕೆನಡಾದ ಟೊರಂಟೋಗೆ ಹೊರಡಲು ಸಿದ್ಧವಾಗಿದ್ದ ಏರ್ ಕೆನಡಾ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಕಿಡಿಗೇಡಿಗಳು ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಇ-ಮೇಲ್ ಕಳುಹಿಸಿದ್ದಾರೆ. ಇದು ತಿಂಗಳಿನ 5ನೇ ಘಟನೆ ಆಗಿದೆ.
ಇದರ ಪರಿಣಾಮ ವಿಮಾನವನ್ನು ಖಾಲಿ ಮಾಡಿ ಭದ್ರತಾ ಪಡೆಗಳು ಹಾಗೂ ಬಾಂಬ್ ನಿಷ್ಕೃಯ ದಳದವರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಯಾವುದೇ ಬಾಂಬ್ ಪತ್ತೆಯಾಗದ ಕಾರಣ ಹುಸಿ ಬಾಂಬ್ ಮೇಲ್ ಎಂದು ಪರಿಗಣಿಸಿದ್ದಾರೆ. ಇ-ಮೇಲ್ ಕಳುಹಿಸಿದವರ ವಿರುದ್ಧ ಪ್ರಕರಣ ದಾಖಲಿಸಿಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ವಾರ ದೆಹಲಿಯಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನ 30 ನಿಮಿಷದಲ್ಲಿ ಸ್ಫೋಟವಾಗುತ್ತದೆ ಎಂದು ಹುಸಿ ಬೆದರಿಕೆ ಬಂದಿತ್ತು.