ಸಾರಾಂಶ
ಪತ್ನಿಯಿಂದ 3 ಕೋಟಿ ರು. ಜೀವನಾಂಶ ನೋಟಿಸ್ ಬಳಿಕ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅತುಲ್ ಸುಭಾಶ್ ಅವರ 2 ವರ್ಷದ ಪುತ್ರನನ್ನು ತಮಗೆ ವಹಿಸುವಂತೆ ಅತುಲ್ ತಂದೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಪಟನಾ: ಪತ್ನಿಯಿಂದ 3 ಕೋಟಿ ರು. ಜೀವನಾಂಶ ನೋಟಿಸ್ ಬಳಿಕ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅತುಲ್ ಸುಭಾಶ್ ಅವರ 2 ವರ್ಷದ ಪುತ್ರನನ್ನು ತಮಗೆ ವಹಿಸುವಂತೆ ಅತುಲ್ ತಂದೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಒಂದು ವೇಳೆ ಮಗುವನ್ನು ಹುಡುಕದಿದ್ದರೆ ತಮ್ಮ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಈ ಬಗ್ಗೆ ಬಿಹಾರದ ಸಮಸ್ತಿಪುರದಲ್ಲಿ ವೈನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅತುಲ್ ತಂದೆ ಪವನ್ ಮೋದಿ, ಅತುಲ್ ಮೃತಪಟ್ಟ ಬಳಿಕ ಮಗು ಎಲ್ಲಿದೆ ಎಂದು ಇನ್ನು ತಿಳಿದುಬಂದಿಲ್ಲ. 2 ವರ್ಷದ ಮಗುವನ್ನು ಬೋರ್ಡಿಂಗ್ ಶಾಲೆಯಲ್ಲಿ ಇರಿಸಿದ್ದಾರೆಯೇ, ಅಥವಾ ಅತುಲ್ ಪತ್ನಿಯ ಕುಟುಂಬಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.ಜೊತೆಗೆ ಅತುಲ್ ತನ್ನ ಮರಣಪತ್ರದಲ್ಲಿ ಮಗುವು ನಮ್ಮ ಆಶ್ರಯದಲ್ಲಿಯೇ ಬೆಳೆಯಬೇಕು ಎಂದು ತಮ್ಮ ಕೊನೆ ಆಸೆ ಬರೆದಿದ್ದಾರೆ. ಆದರೆ ಇಲ್ಲಿ ಮಗು ಎಲ್ಲಿದೆಯೋ ಎಂಬುದು ಇನ್ನು ತಿಳಿದುಬಂದಿಲ್ಲ. ಒಂದು ವೇಳೆ ಮಗು ನಮ್ಮ ಕೈ ಸೇರದಿದ್ದರೆ, ನಮ್ಮ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.
ಅತುಲ್ ತಂದೆ ಪವನ್ ಮೋದಿ ನೀಡಿದ ದೂರಿನ ಮೇರೆಗೆ ಬಿಹಾರ ಪೊಲೀಸರು ಝೀರೋ ಎಫ್‌ಐಆರ್ ದಾಖಲಿಸಿದ್ದು, ಉತ್ತರ ಪ್ರದೇಶ ಪೊಲೀಸರಿಗೆ ವರ್ಗಾಯಿಸಿದ್ದಾರೆ.