ಸಾರಾಂಶ
ಇತ್ತೀಚೆಗೆ ಹರ್ಯಾಣದ ಫರೀದಾಬಾದ್‌ನಲ್ಲಿ ಬಂಧಿತನಾಗಿದ್ದ ಶಂಕಿತ ಐಸಿಸ್ ಉಗ್ರ ಅಬ್ದುಲ್ ರೆಹಮಾನ್ ಏ.6 ರಾಮನವಮಿಯಂದು ಅಯೋಧ್ಯೆಯ ರಾಮಮಂದಿರ ಮೇಲೆ ದಾಳಿಗೆ ಸಜ್ಜಾಗಿದ್ದ ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಗುರುಗ್ರಾಮ: ಇತ್ತೀಚೆಗೆ ಹರ್ಯಾಣದ ಫರೀದಾಬಾದ್‌ನಲ್ಲಿ ಬಂಧಿತನಾಗಿದ್ದ ಶಂಕಿತ ಐಸಿಸ್ ಉಗ್ರ ಅಬ್ದುಲ್ ರೆಹಮಾನ್ ಏ.6 ರಾಮನವಮಿಯಂದು ಅಯೋಧ್ಯೆಯ ರಾಮಮಂದಿರ ಮೇಲೆ ದಾಳಿಗೆ ಸಜ್ಜಾಗಿದ್ದ ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ ವಿರುದ್ಧ ಯುಎಪಿಎ (ಕಾನೂನು ಬಾಹಿರ ಚಟುವಟಿಕೆ ತಡೆ) ಕಾಯ್ದೆ ಹೊರಿಸಲಾಗಿದ್ದು ಅದರ ಅನ್ವಯ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಫರೀದಾಬಾದ್‌ನಿಂದ ಗ್ರೆನೇಡ್ ಸಂಗ್ರಹಿಸಿ ಅಯೋಧ್ಯೆಗೆ ತೆರಳುತ್ತಿದ್ದ ವೇಳೆ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಅಬ್ದುಲ್‌ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ತಾನು ಆನ್‌ಲೈನ್ ಮೂಲಕವೇ ಉಗ್ರ ಸಂಘಟನೆಗಳಿಂದ ತರಬೇತಿ ಪಡೆದಿದ್ದ ಅಬ್ದುಲ್, ಅಯೋಧ್ಯೆ ರಾಮಮಂದಿರ, ಸೋಮನಾಥ ಮಂದಿರಗಳ ಪರಿಶೀಲನೆ ನಡೆಸಿ ದಾಳಿಗೆ ಸಿದ್ಧತೆ ನಡೆಸಿದ್ದ ಎಂಬ ವಿಷಯವನ್ನು ಬಾಯಿಬಿಟ್ಟಿದ್ದಾನೆ.