4 ಜನರನ್ನು ಬಲಿ ಪಡೆದ ಬಿಹಾರದ ಬಕ್ಸರ್‌ ರೈಲು ದುರಂತಕ್ಕೆ ಹಳಿಗಳ ದೋಷವೇ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆ ಹೇಳಿದೆ. ಆದರೆತ ಉತರ ಕೆಲವು ರೈಲ್ವೆ ಅಧಿಕಾರಿಗಳು ರೈಲು ಅತಿ ವೇಗದಲ್ಲಿ (ಗಂಟೆಗೆ 128 ಕಿ.ಮೀ.) ಸಾಗುತ್ತಿದ್ದಾಗ ಬ್ರೇಕ್‌ ಹಾಕಿದ್ದೇ ಹಳಿ ತಪ್ಪಲು ಕಾರಣವಿರಬಹುದು ಎಂದು ಸಂದೇಹಿಸಿದ್ದಾರೆ.

ರೈಲು 128 ಕಿ.ಮೀ. ವೇಗದಲ್ಲಿ ಸಾಗುವಾಗ ಬ್ರೇಕ್‌ ಹಾಕಿದ ಚಾಲಕ, ಇದು ಈಶಾನ್ಯ ಎಕ್ಸ್‌ಪ್ರೆಸ್‌ ಹಳಿ ತಪ್ಪಲು ಕಾರಣ: ಕೆಲವು ಅಧಿಕಾರಿಗಳ ಶಂಕೆ, ಹಳಿಗಳ ದೋಷವೇ ಕಾರಣ ಇರಬಹುದು: ಪ್ರಾಥಮಿಕ ತನಿಖೆ ನವದೆಹಲಿ: 4 ಜನರನ್ನು ಬಲಿ ಪಡೆದ ಬಿಹಾರದ ಬಕ್ಸರ್‌ ರೈಲು ದುರಂತಕ್ಕೆ ಹಳಿಗಳ ದೋಷವೇ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆ ಹೇಳಿದೆ. ಆದರೆತ ಉತರ ಕೆಲವು ರೈಲ್ವೆ ಅಧಿಕಾರಿಗಳು ರೈಲು ಅತಿ ವೇಗದಲ್ಲಿ (ಗಂಟೆಗೆ 128 ಕಿ.ಮೀ.) ಸಾಗುತ್ತಿದ್ದಾಗ ಬ್ರೇಕ್‌ ಹಾಕಿದ್ದೇ ಹಳಿ ತಪ್ಪಲು ಕಾರಣವಿರಬಹುದು ಎಂದು ಸಂದೇಹಿಸಿದ್ದಾರೆ. ಗುರುವಾರ ರಾತ್ರಿ 9:52ಕ್ಕೆ ದೆಹಲಿಯ ಆನಂದ್‌ ವಿಹಾರ ಟರ್ಮಿನಸ್‌ನಿಂದ ಅಸ್ಸಾಂನ ಕಾಮಾಕ್ಯ ನಿಲ್ದಾಣಕ್ಕೆ ತೆರಳುತ್ತಿದ್ದ ನಾರ್ಥ್‌ ಈಸ್ಟ್‌ ಎಕ್ಸ್‌ಪ್ರೆಸ್‌ ಇಲ್ಲಿನ ರಘುನಾಥಪುರ ನಿಲ್ದಾಣವನ್ನುದಾಟಿತ್ತು. ಆಗ ರೈಲು ಹಳಿ ತಪ್ಪಿತ್ತು. ಈ ಬಗ್ಗೆ ಪ್ರಾಥಮಿಕ ತನಿಖೆ ವರದಿಯ ಮಾಹಿತಿಯನ್ನು ಮೂಲಗಳು ನೀಡಿದ್ದು, ‘ಹಳಿಯಲ್ಲಿನ ದೋಷವು ಘಟನೆಗೆ ಕಾರಣವಾಗಿಬಹುದು ಎಂದು ಹೇಳಲಾಗಿದೆ. ಒಟ್ಟಾರೆ ಈ ಘಟನೆಯಿಂದ 52 ಕೋಟಿ ರು. ಹಾನಿಯಾಗಿದೆ’ ಎಂದಿವೆ. ಆದರೆ ರೈಲು ಚಾಲಕ ವಿಪಿನ್‌ ಸಿನ್ಹಾ ಹೇಳಿಕೆ ನೀಡಿ, ‘ರೈಲು ರಘುನಾಥಪುರ ರೈಲು ನಿಲ್ದಾಣವನ್ನು 128 ಕಿ.ಮೀ. ವೇಗದಲ್ಲಿ ದಾಟಿತು. ಆಗ ರೈಲಿನಲ್ಲಿ ಇದ್ದಕ್ಕಿದ್ದಂತೆ ತೀವ್ರ ಕಂಪನ ಶುರುವಾಗಿ ಹಿಂದಿನ ಬೋಗಿಗಳು ಅಲುಗಾಡಲಾರಂಭಿಸಿದ್ದವು. ಅಲ್ಲದೇ ಈ ತೀವ್ರ ಕಂಪನದಿಂದಾಗಿ ಏಕಾಏಕಿ ರೈಲಿನ ಬ್ರೇಕ್‌ ಪ್ರೇಶರ್‌ ಇಳಿದು ರೈಲು ಹಳಿತಪ್ಪಿದೆ’ ಎಂದು ವರದಿ ನೀಡಿದ್ದಾರೆ. ಕೆಲವು ಅಧಿಕಾರಿಗಳು ಚಾಲಕನ ಹೇಳಿಕೆಯನ್ನೇ ಉಲ್ಲೇಖಿಸಿ, ಅತಿ ವೇಗದಲ್ಲಿ ರೈಲು ಸಾಗುವಾಗ ಬ್ರೇಕ್‌ ಹಾಕಿದ್ದೇ ಘಟನೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಈ ದುರಂತದಿಂದಾಗಿ ಕನಿಷ್ಠ ನಾಲ್ಕು ಜನರು ಮೃತಪಟ್ಟಿದ್ದು, ಚಾಲಕ ಸಿನ್ಹಾ, ರೈಲಿನ ಸಹಾಯಕ ಚಾಲಕ ಸೇರಿ ಹಲವು ಮಂದಿ ಗಾಯಗೊಂಡಿದ್ದಾರೆ.