ದಕ್ಷಿಣದ ರಾಜ್ಯಗಳಲ್ಲಿ ‘ಫಲವತ್ತತೆಯ ಮಟ್ಟ’ ವಿಪರೀತ ಕುಸಿತ : ನಾಯ್ಡು ಮತ್ತೆ ಕಳವಳ

| Published : Nov 17 2024, 01:21 AM IST / Updated: Nov 17 2024, 05:08 AM IST

ಸಾರಾಂಶ

ದಕ್ಷಿಣದ ರಾಜ್ಯಗಳಲ್ಲಿ ‘ಫಲವತ್ತತೆಯ ಮಟ್ಟ’ (ಜನನ ಪ್ರಮಾಣ) ವಿಪರೀತ ಕುಸಿತವಾಗುತ್ತಿರುವ ಬಗ್ಗೆ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಜನಸಂಖ್ಯಾ ಸಮತೋಲನ ಕಾಯಲು ನೀತಿ ಅಗತ್ಯ ಎಂದು ಹೇಳಿದ್ದಾರೆ.

ನವದೆಹಲಿ: ದಕ್ಷಿಣದ ರಾಜ್ಯಗಳಲ್ಲಿ ‘ಫಲವತ್ತತೆಯ ಮಟ್ಟ’ (ಜನನ ಪ್ರಮಾಣ) ವಿಪರೀತ ಕುಸಿತವಾಗುತ್ತಿರುವ ಬಗ್ಗೆ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಜನಸಂಖ್ಯಾ ಸಮತೋಲನ ಕಾಯಲು ನೀತಿ ಅಗತ್ಯ ಎಂದು ಹೇಳಿದ್ದಾರೆ.

ಎಚ್‌ಟಿ ಲೀಡರ್‌ಶಿಪ್‌ ಶೃಂಗಸಭೆಯಲ್ಲಿ ಮಾತನಾಡಿದ ನಾಯ್ಡು, ‘ಜಪಾನ್‌, ಚೀನಾ ಹಾಗೂ ಎಲ್ಲಾ ಐರೋಪ್ಯ ರಾಷ್ಟ್ರಗಳಲ್ಲಿ ವಯಸ್ಸಾದವರ ಸಂಖ್ಯೆ ಅಧಿಕವಿದೆ. ಈ ವಿಷಯದಲ್ಲಿ ಭಾರತವೊಂದೇ 2047ರ ತನಕ ಸುರಕ್ಷಿತವಾಗಿದೆ. ಈಗ ಭಾರತದ ದಕ್ಷಿಣ ರಾಜ್ಯಗಳಲ್ಲಿ ಫಲವತ್ತತೆಯ ಪ್ರಮಾಣ (ಜನನ ಪ್ರಮಾಣ) 1.6ರಷ್ಟಿದೆ. ಆದರೆ ಜನಸಂಖ್ಯೆಯನ್ನು ಕಾಪಾಡಿಕೊಳ್ಳಲು ಇದು 2.1ರಷ್ಟಿರುವುದು ಅಗತ್ಯ. ಇಲ್ಲದಿದ್ದರೆ ಜನಸಂಖ್ಯೆ ಕುಸಿಯುತ್ತದೆ’ ಎಂದರು.

‘ಜನಸಂಖ್ಯೆ ಮತ್ತು ಐಶ್ವರ್ಯದ ನಡವೆ ಸಂಬಂಧವಿದೆ. ಜನರ ಗಳಿಕೆ ಅಧಿಕವಾದಷ್ಟೂ ಮಕ್ಕಳು ಬೇಡ ಎನ್ನುತ್ತಿದ್ದಾರೆ. ಇದು ಅಪಾಯಕಾರಿ. ಜನಸಂಖ್ಯೆ ನಿರ್ವಹಣೆಯಿಂದ ಮುಂದಿನ ದಿನಗಳಲ್ಲಿ ಸಹಾಯವಾಗಲಿದೆ. ಬ್ರಿಟಿಷರಂತೆ ಭಾರತೀಯರು ಅನ್ಯ ರಾಷ್ಟ್ರಗಳಿಗೆ ಹೋಗಿ ಸಂಪಾದಿಸಬಹುದು’ ಎಂದು ಅವರು ಹೇಳಿದರು. ಅಂತೆಯೇ, ಸರ್ಕಾರ ಜನಸಂಖ್ಯಾ ವೃದ್ಧಿಯನ್ನು ಪ್ರೋತ್ಸಾಹಿಸುವಂತಹ ನೀತಿಗಳನ್ನು ರೂಪಿಸಬೇಕು ಎಂದರು.