ಸಾರಾಂಶ
ಸರ್ಕಾರದ ಅಧಿಕೃತ ಕೆಲಸ ಕಾರ್ಯಗಳಿಗೆ ಚಾಟ್‌ಜಿಪಿಟಿ ಅಥವಾ ಚೀನಾದ ಡೀಪ್‌ಸೀಕ್ ಬಳಸದಂತೆ ಕೇಂದ್ರ ಗೃಹ ಸಚಿವಾಲಯವು ತನ್ನ ಸಿಬ್ಬಂದಿಗಳಿಗೆ ಸೂಚನೆ ನೀಡಿದೆ.
ನವದೆಹಲಿ: ಸರ್ಕಾರದ ಅಧಿಕೃತ ಕೆಲಸ ಕಾರ್ಯಗಳಿಗೆ ಚಾಟ್‌ಜಿಪಿಟಿ ಅಥವಾ ಚೀನಾದ ಡೀಪ್‌ಸೀಕ್ ಬಳಸದಂತೆ ಕೇಂದ್ರ ಗೃಹ ಸಚಿವಾಲಯವು ತನ್ನ ಸಿಬ್ಬಂದಿಗಳಿಗೆ ಸೂಚನೆ ನೀಡಿದೆ.
ಈ ವಿದೇಶಿ ಆ್ಯಪ್‌ಗಳ ಬಳಕೆಯು ಸರ್ಕಾರದ ರಹಸ್ಯ ದಾಖಲೆಗಳ ಸುರಕ್ಷತೆ ಮತ್ತು ಗೌಪ್ಯತೆಗೆ ಧಕ್ಕೆ ತರಬಹುದು ಎಂದು ಕೇಂದ್ರ ಗೃಹ ಸಚಿವಾಲಯವು ಆಂತರಿಕವಾಗಿ ಹೊರಡಿಸಿರುವ ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ. ಸರ್ಕಾರಿ ದಾಖಲೆಗಳು ಮತ್ತು ಡೇಟಾದ ರಕ್ಷಣೆ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಉಪಕರಣಗಳಲ್ಲಿ ಇವುಗಳ ಬಳಕೆ ಬೇಡ ಎಂದು ಸಚಿವಾಲಯ ಹೇಳಿದೆ.
‘ಕಚೇರಿ ಕಂಪ್ಯೂಟರ್‌ಗಳು ಮತ್ತು ಇತರ ಸಾಧನಗಳಲ್ಲಿನ ಎಐ ಅಪ್ಲಿಕೇಶನ್‌ಗಳು (ಚಾಟ್‌ಜಿಪಿಟಿ, ಡೀಪ್‌ಸೀಕ್ ಇತ್ಯಾದಿ) ಸರ್ಕಾರಿ ಡೇಟಾ ಮತ್ತು ದಾಖಲೆಗಳ ಗೌಪ್ಯತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ನಿರ್ಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.