ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ : ಸಾವು - ನೋವಿಲ್ಲ

| N/A | Published : Feb 08 2025, 12:31 AM IST / Updated: Feb 08 2025, 07:53 AM IST

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ : ಸಾವು - ನೋವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದದಲ್ಲಿ ಮತ್ತೆ ಬೆಂಕಿ ಅವಘಢ ಸಂಭವಿಸಿದೆ. ಶುಕ್ರವಾರ ಇಲ್ಲಿನ ಇಸ್ಕಾನ್ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಮಹಾಕುಂಭ ನಗರ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದದಲ್ಲಿ ಮತ್ತೆ ಬೆಂಕಿ ಅವಘಢ ಸಂಭವಿಸಿದೆ. ಶುಕ್ರವಾರ ಇಲ್ಲಿನ ಇಸ್ಕಾನ್ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಒಂದು ಡಜನ್‌ಗೂ ಹೆಚ್ಚು ಟೆಂಟ್‌ಗಳಿಗೆ ಬೆಂಕಿ ಹರಡಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.

ಕುಂಭಮೇಳದ ಸೆಕ್ಟರ್‌ 18ರಲ್ಲಿರುವ ಇಸ್ಕಾನ್ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಂಭಮೇಳ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸುತ್ತಿರುವುದು ಇದು ಮೂರನೇ ಬಾರಿ. ಜ.19ರಂದು ಸೆಕ್ಟರ್‌ 19ರಲ್ಲಿ ಸಿಲಿಂಡರ್‌ ಸ್ಫೋಟದಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಜ.25ರಂದು ಸೆಕ್ಟರ್‌ 2ರಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಎರಡು ಕಾರುಗಳಿಗೆ ಬೆಂಕಿ ತಗುಲಿತ್ತು. ಆದರೆ ಅದೃಷ್ಟವಶಾತ್‌ ಈ ಘಟನೆಗಳಲ್ಲಿ ಯಾವುದೇ ಸಾವು- ನೋವು ಸಂಭವಿಸಿರಲಿಲ್ಲ.

ಮೇ4ಕ್ಕೆ ನೀಟ್-ಯುಜಿ ಪರೀಕ್ಷೆ

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿಯನ್ನು ಮೇ 4ರಂದು ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ತಿಳಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆ.07ರಿಂದ ಮಾ.04ರವರೆಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ಇದು ದೇಶದ ಅತಿ ದೊಡ್ಡ ಪ್ರವೇಶ ಪರೀಕ್ಷೆಯಾಗಿದೆ. 2024ರಲ್ಲಿ ದಾಖಲೆಯ 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಇಸ್ರೇಲ್ ವಿರುದ್ಧದ ತನಿಖೆಗೆ ಕಿಡಿ: ಅಂತಾರಾಷ್ಟ್ರೀಯ ಕೋರ್ಟ್‌ಗೆ ಟ್ರಂಪ್‌ ಶಿಕ್ಷೆ

ವಾಷಿಂಗ್ಟನ್‌/ ಹೇಗ್: ಗಾಜಾ ಮೇಲಿನ ದಾಳಿ ಪ್ರಕರಣದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಯುದ್ಧಾಪರಾಧಿ ಎಂದು ಘೋಷಿಸಿದ್ದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಮೇಲೆ ಅಮೆರಿಕ ನಿರ್ಭಂಧ ಹೇರಿದೆ. ‘ಕೋರ್ಟ್‌ ಇಸ್ರೇಲ್ ಗುರಿಯಾಗಿಸಿಕೊಂಡು ಕಾನೂನುಬಾಹಿರ ಮತ್ತು ಆಧಾರಹಿತ ತನಿಖೆಯಲ್ಲಿ ತೊಡಗಿದೆ. ಐಸಿಸಿಗೆ ಅಮೆರಿಕ ಅಥವಾ ಇಸ್ರೇಲ್ ಮೇಲೆ ಯಾವುದೇ ಅಧಿಕಾರದ ವ್ಯಾಪ್ತಿ ಇಲ್ಲ’ ಎಂದು ಟ್ರಂಪ್ ಸಹಿಯೊಂದಿಗೆ ಹೊರಡಿಸಲಾದ ಕಾರ್ಯಾದೇಶದಲ್ಲಿ ಹೇಳಲಾಗಿದೆ. 2023ರ ಇಸ್ರೇಲ್ ಮತ್ತು ಹಮಾಸ್‌ ನಡುವಿನ ಯುದ್ಧದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಪ್ಪಿತಸ್ಥ ಎಂದು ಕೋರ್ಟ್‌ ಹೇಳಿತ್ತು. ಜೊತೆಗೆ ಅರೆಸ್ಟ್‌ ವಾರಂಟ್‌ ಜಾರಿಗೊಳಿಸಿತ್ತು. ಈ ನಡುವೆ ಆದರೆ ಟ್ರಂಪ್ ನಡೆಗೆ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ ವಿರೋಧ ವ್ಯಕ್ತಪಡಿಸಿದ್ದು ಟ್ರಂಪ್ ಕ್ರಮವನ್ನು ನ್ಯಾಯಾಲಯ ಖಂಡಿಸುತ್ತದೆ. ಅಲ್ಲದೇ ಈ ನಿರ್ಧಾರದಲ್ಲಿ ದೃಢವಾಗಿ ನಿಲ್ಲುತ್ತದೆ. ದೌರ್ಜನ್ಯಕ್ಕೊಳಗಾದ ಬಲಿಪಶುಗಳಿಗೆ ನ್ಯಾಯಾ ಒದಗಿಸುತ್ತೇವೆ ಎಂದಿದ್ದಾರೆ.