ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಬಡವರಿಗೆ, ಅಲ್ಪಸಂಖ್ಯಾತರಿಗಲ್ಲ: ಶಾ

| Published : Apr 23 2024, 12:47 AM IST / Updated: Apr 23 2024, 07:49 AM IST

Amith Shah

ಸಾರಾಂಶ

‘ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ಸಮುದಾಯದವರಿಗೆ ದೇಶದ ಸಂಪನ್ಮೂಲಗಳಲ್ಲಿ ಮೊದಲ ಹಕ್ಕಿದೆ ಎಂದು ನಂಬಿದೆ.

ಕಂಕರ್ ( ಛತ್ತಿಸಗಢ): ‘ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ಸಮುದಾಯದವರಿಗೆ ದೇಶದ ಸಂಪನ್ಮೂಲಗಳಲ್ಲಿ ಮೊದಲ ಹಕ್ಕಿದೆ ಎಂದು ನಂಬಿದೆ. ಆದರೆ ಬಿಜೆಪಿ ಈ ಮಾತನ್ನು ಒಪ್ಪುವುದಿಲ್ಲ.

 ದೇಶದ ಸಂಪನ್ಮೂಲಗಳಲ್ಲಿ ಮೊದಲ ಹಕ್ಕಿರುವುದು ಬಡವರಿಗೆ, ದಲಿತರಿಗೆ , ಆದಿವಾಸಿಗಳಿಗೆ ಮತ್ತು ಹಿಂದುಳಿದ ಸಮುದಾಯದವರಿಗೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಕೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಈ ಮೂಲಕ ರಾಜಸ್ಥಾನ ರ್‍ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ವಿರುದ್ಧ ಮಾಡಿದ ಆರೋಪಗಳನ್ನು ಸಮರ್ಥಿಸಿಕೊಂಡರು.

ಛತ್ತಿಸಗಢದ ಕಂಕರ್ ಕ್ಷೇತ್ರದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಶಾ ,‘ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಛತ್ತಿಸಗಢದಲ್ಲಿ ನಕ್ಸಲಿಸಂ ನಿಗ್ರಹವಾಗುತ್ತಿದೆ. 

ಆದರೆ ಕಾಂಗ್ರೆಸ್ ತನ್ನ ಆಡಳಿತವಧಿಯಲ್ಲಿ ಈ ರೀತಿಯ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನ ಕುಟುಂಬ ರಾಜಕಾರಣ ಬಗ್ಗೆಯೂ ಟೀಕಿಸಿದ ಶಾ , ನಾಲ್ಕು ತಲೆಮಾರುಗಳ ಆಡಳಿತದಲ್ಲಿ ಛತ್ತಿಸಗಢದಲ್ಲಿ ಬಡವರ ಅಭಿವೃದ್ಧಿಗೆ ಕಾಂಗ್ರೆಸ್ ಏನು ಮಾಡಿದೆ ಎಂದು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ..