ಸಾರಾಂಶ
ಪ್ರಧಾನಿ ಮೋದಿ, ಸೋಮವಾರದ ಚುನಾವಣಾ ಪ್ರಚಾರದ ವೇಳೆ ಮುಸ್ಲಿಂ ಸಮುದಾಯದ ಒಳಿತಿಗಾಗಿ ತಮ್ಮ ಸರ್ಕಾರ ಕೈಗೊಂಡ ಕ್ರಮಗಳನ್ನು ಮತ್ತೊಮ್ಮೆ ಸ್ಮರಿಸಿದ್ದಾರೆ.
ಅಲಿಗಢ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ನೀತಿಯಂತೆ ಮುಸಲ್ಮಾನರು, ಒಳನುಸುಳುಕೋರರು ಹಾಗೂ ‘ಹೆಚ್ಚು ಮಕ್ಕಳಿದ್ದವರಿಗೆ’ ಹಂಚಲಾಗುತ್ತದೆ ಎಂದು ಭಾನುವಾರದ ಕಿಡಿಕಾರಿದ್ದ ಪ್ರಧಾನಿ ಮೋದಿ, ಸೋಮವಾರದ ಚುನಾವಣಾ ಪ್ರಚಾರದ ವೇಳೆ ಮುಸ್ಲಿಂ ಸಮುದಾಯದ ಒಳಿತಿಗಾಗಿ ತಮ್ಮ ಸರ್ಕಾರ ಕೈಗೊಂಡ ಕ್ರಮಗಳನ್ನು ಮತ್ತೊಮ್ಮೆ ಸ್ಮರಿಸಿದ್ದಾರೆ.
ಸೋಮವಾರ ಅಲಿಗಢದಲ್ಲಿ ಮಾತನಾಡಿದ ಮೋದಿ, ‘ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಓಲೈಕೆ ರಾಜಕಾರಣದಿಂದ ಮುಸ್ಲಿಂರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಾಗಿ ಏನೂ ಮಾಡಿಲ್ಲ. ಆದರೆ ನಮ್ಮ ಸರ್ಕಾರ ತ್ರಿವಳಿ ತಲಾಖ್ ನೀಡುವ ಪದ್ಧತಿ ವಿರುದ್ಧ ಕಾನೂನು ರಚಿಸುವ ಮೂಲಕ ಅದಕ್ಕೆ ಅಂತ್ಯವಾಡಿ ಮುಸ್ಲಿಂ ಮಹಿಳೆಯರ ಜೀವನಕ್ಕೆ ಭದ್ರತೆ ಒದಗಿಸಿದೆ. ಮುಸ್ಲಿಂ ಬಾಂಧವರಿಗೆ ನೀಡುವ ಹಜ್ ಕೋಟಾ ಪ್ರಮಾಣ ಹೆಚ್ಚಿಸಲಾಗಿದೆ’ ಎಂದು ಹೇಳಿದರು.