ನಮಗೆ ಕುರಾನ್‌ ಮೊದಲ ಸಂವಿಧಾನ : ಸುಪ್ರೀಂ ತೀರ್ಪಿಗೆ ಶಮೀನಾ ವಿರೋಧ

| Published : Jul 12 2024, 01:31 AM IST / Updated: Jul 12 2024, 05:50 AM IST

supreme court 02.jpg
ನಮಗೆ ಕುರಾನ್‌ ಮೊದಲ ಸಂವಿಧಾನ : ಸುಪ್ರೀಂ ತೀರ್ಪಿಗೆ ಶಮೀನಾ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

 ಮುಸ್ಲಿಂ ಮಹಿಳಾ ನಾಯಕಿಯೊಬ್ಬರು, ನಮಗೆ ಧರ್ಮಗ್ರಂಥ ಕುರಾನ್‌ ಮೊದಲ ಸಂವಿಧಾನ. ಕುರಾನ್‌ ವಿರೋಧಿಸುವ ಯಾವುದನ್ನೂ ನಾವು ಒಪ್ಪುವುದಿಲ್ಲ ಎಂದು ಪರೋಕ್ಷವಾಗಿ ಸುಪ್ರೀಂಕೋರ್ಟ್‌ ತೀರ್ಪು ಮತ್ತು ಭಾರತದ ಸಂವಿಧಾನವನ್ನೇ ವಿರೋಧಿಸಿದ್ದಾರೆ.

ನವದೆಹಲಿ: ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶದ ಹಕ್ಕುದಾರರು ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಬೇಕಿದ್ದ ಮುಸ್ಲಿಂ ಮಹಿಳಾ ನಾಯಕಿಯೊಬ್ಬರು, ನಮಗೆ ಧರ್ಮಗ್ರಂಥ ಕುರಾನ್‌ ಮೊದಲ ಸಂವಿಧಾನ. ಕುರಾನ್‌ ವಿರೋಧಿಸುವ ಯಾವುದನ್ನೂ ನಾವು ಒಪ್ಪುವುದಿಲ್ಲ ಎಂದು ಪರೋಕ್ಷವಾಗಿ ಸುಪ್ರೀಂಕೋರ್ಟ್‌ ತೀರ್ಪು ಮತ್ತು ಭಾರತದ ಸಂವಿಧಾನವನ್ನೇ ವಿರೋಧಿಸಿದ್ದಾರೆ.

ಬುಧವಾರ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‌ನ ಮಹಿಳಾ ವಿಭಾಗದ ಅಧ್ಯಕ್ಷೆ ಶಮೀನಾ ಫಿರ್ದೋಸ್, ‘ಮುಸ್ಲಿಮರಿಗೆ ಕುರಾನ್ ಮೊದಲ ಸಂವಿಧಾನ. ನಾವು ಅದನ್ನು ಪಾಲಿಸಬೇಕು. ವಿಚ್ಛೇದಿತ ಮಹಿಳೆಗೆ ಜೀವನಾಂಶ ಕೊಡುವ ಕಾನೂನು ಮೊದಲೇ ಇದ್ದು, ಇದು ಮುಸ್ಲಿಂ ಕಾನೂನಿನ ಪ್ರಕಾರವೇ ಇದೆ. ಮುಸ್ಲಿಂ ಕಾನೂನು ಹಾಗೂ ಕುರಾನ್ ಅನ್ನು ವಿರೋಧಿಸುವ ಯಾವುದನ್ನೂ ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಮಾಜಿ ಪತ್ನಿಗೆ ರು.10,000 ಜೀವನಾಂಶ ನಿಡಬೇಕು ಎಂಬ ತೆಲಂಗಾಣ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ|ಬಿ.ವಿ.ನಾಗರತ್ನ ಹಾಗೂ ನ್ಯಾ| ಅಗಸ್ಟಿನ್ ಜಾರ್ಜ್‌ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಎಲ್ಲಾ ವಿಚ್ಛೇದಿತ ಮಹಿಳೆಯರಂತೆ ಜೀವನಾಂಶ ಪಡೆಯುವುದು ಮುಸ್ಲಿಂ ಮಹಿಳೆಯರ ಹಕ್ಕು ಎಂದು ತೀರ್ಪು ನೀಡಿತ್ತು.